ಬೆಂಗಳೂರು : ಭಾರತದ ಪ್ರಮುಖ ಮೊಬೈಲ್ ವಾಲೆಟ್ ಕಂಪೆನಿ ಪೇಟಿಎಂ ಭರ್ಜರಿ ಆಫರ್ ಒಂದನ್ನು ಘೋಷಿಸುವುದರ ಮೂಲಕ ತನ್ನ ಗ್ರಾಹಕರಿಗೊಂದು ಸಿಹಿಸುದ್ದಿ ನೀಡಿದೆ.
ಪೇಟಿಎಂ ಆಪ್ ಮೂಲಕ ಬ್ಯಾಂಕಿಗೆ ಹಣ ವರ್ಗಾವಣೆ ಮಾಡಿದರೆ ಪ್ರತಿಬಾರಿ ರೂ.100ವರೆಗೆ ಪೇಟಿಎಂನಲ್ಲಿ ಹಣ ಪಡೆಯಬಹುದು ಎಂಬುದಾಗಿ ಈ ಕಂಪೆನಿ ತಿಳಿಸಿದೆ. ಯಾವುದೇ ಬ್ಯಾಂಕ್ ಶಾಖೆಯಿಂದ ಇತರೆ ಯಾವುದೇ ಬ್ಯಾಂಕ್ ಶಾಖೆಗೆ ಹಣ ವರ್ಗಾವಣೆ ಮಾಡಬಹುದಾದ ಈ ಪ್ರಕ್ರಿಯೆಯಲ್ಲಿ ಗ್ರಾಹಕರು ಹಣವನ್ನು ಪೇಟಿಎಂ ವ್ಯಾಲೆಟ್ಗೆ ಕಳುಹಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಹಾಗೇ ಈ ವರ್ಗಾವಣೆ ಪ್ರಕ್ರಿಯೆಗೆ ಯಾವುದೇ ಶುಲ್ಕವೂ ಇರುವುದಿಲ್ಲ. ಆದರೆ ಹಣಗಳಿಸಬಹುದು ಎಂದು ಒನ್97 ಕಮ್ಯುನಿಕೇಷನ್ಸ್ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ