ವದಂತಿಗೆ ಬ್ರೇಕ್: ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಎಂದ ಆರ್ ಬಿಐ
ಮುಂಬೈ: ಎಲ್ಲಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂಬ ವದಂತಿಯನ್ನು ಆರ್ ಬಿಐ ತಳ್ಳಿಹಾಕಿದೆ. ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಯಮಗಳು ಶಾಸನಬದ್ಧವಾಗಿ ಜಾರಿಯಲ್ಲಿವೆ. ಮುಂದಿನ ಸೂಚನೆವರೆಗೂ ಕಾಯ್ದೆಯಡಿ ಬ್ಯಾಂಕ್‌ಗಳು ತಮ್ಮ ನಿಯಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆರ್‌ಬಿಐ ಸೂಚಿಸಿದೆ.