ಜಿಯೋಗೆ ಶಾಕ್: ಬಿಎಸ್‌ಎನ್‍ಎಲ್ ಫ್ರೀ ಆಫರ್

ಮಂಗಳವಾರ, 6 ಡಿಸೆಂಬರ್ 2016 (12:22 IST)
ಉಚಿತ ಕರೆ, ಡಾಟಾ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಕಂಪನಿ ರಿಲಯನ್ಸ್ ಜಿಯೋ ಇನ್ಪೋಕಾಮ್. ಇದರೊಂದಿಗೆ ಜಿಯೋ ಸ್ಪರ್ಧೆಗೆ ಪ್ರತಿಸ್ಪರ್ಧೆ ನೀಡಲು ಅನೇಕ ಟೆಲಿಕಾಂ ಕಂಪನಿಗಳು ಆಫರ್‌ಗಳೊಂದಿಗೆ ಮುಂದೆ ಬರುತ್ತಿವೆ.
 
ಈ ಹಿನ್ನೆಲೆಯಲ್ಲಿ ಜಿಯೋಗೆ ಸ್ವಲ್ಪ ಮಟ್ಟಿಗೆ ಹೊಡೆತ ನೀಡಲು ಸರಕಾರಿ ಸ್ವಾಮ್ಯದ ಟೆಲಿಕಾಂ ದಿಗ್ಗಜ ಭಾರತ್ ಸಂಚಾರ್ ನಿಮಗ್ ಲಿಮಿಟೆಡ್ (ಬಿಎಸ್‌ಎನ್‍ಎಲ್) ಶರವೇಗವಾಗಿ ಮುಂದೆ ಬರುತ್ತಿದೆ. ತಮ್ಮ ಚಂದಾದಾರರಿಗೆ ಉಚಿತ ವಾಯ್ಸ್ ಕಾಲ್ಸ್, ಇತರೆ ಫ್ರೀ ಆಫರ್‌ಗಳೊಂದಿಗೆ ಹೊಸ ಮಂತ್ಲಿ ಪ್ಲಾನ್ ಪರಿಚಯಿಸುತ್ತಿದೆ. 
 
ಜನವರಿ 1ರಿಂದ ಈ ಬಂಪರ್ ಆಫರ್ ಚಂದಾದಾರರಿಗೆ ನೀಡಲಿದೆ. ತಿಂಗಳಿಗೆ ರೂ.149 ರೀಚಾರ್ಜ್‌ನೊಂದಿಗೆ ಯಾವ ನೆಟ್‌ವರ್ಕ್‌ಗೆ ಬೇಕಾದರೂ ಅನ್ ಲಿಮಿಟೆಡ್ ಲೋಕಲ್ ಅಂಡ್ ನ್ಯಾಶನಲ್ ಕಾಲ್ ಜೊತೆಗೆ 300 ಎಂಬಿ ಡಾಟಾ ಉಚಿತವಾಗಿ ಈ ಪ್ಲಾನ್ ಲಾಂಚ್ ಮಾಡುತ್ತಿದೆ.
 
ತಿಂಗಳಿಗೆ ರೂ. 149ಕ್ಕೆ ಭಾರತದ ಯಾವ ನೆಟ್‌ವರ್ಕ್‌ಗಾದರೂ ಅನ್‌ಲಿಜಿಟೆಡ್ ವಾಯ್ಸ್ ಕಾಲ್ ಮಾಡಬಹುದು. ಇದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದಿದ್ದಾರೆ ಬಿಎಸ್‍ಎನ್‍ಎಲ್ ಚೇರ್ಮನ್ ಅನುಪಮ್ ಶ್ರೀವಾತ್ಸವ. ಪ್ರಮುಖ ಸ್ಪರ್ಧಿಗಳಾದ ಏರ್‌ಟೆಲ್, ವೊಡಾಫೋನ್, ಐಡಿಯಾ ಸೆಲ್ಯುಲಾರ್ ಹೊಸ ಚಂದಾದಾರನ್ನು ಆಕರ್ಷಿಸುವುದರ ಜೊತೆಗೆ ಈಗಾಗಲೆ ಇರುವ ಚಂದಾದಾರನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿವೆ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ