ಜೂಮ್ ಆಪ್ ಗೆ ಸ್ಪರ್ಧೆ ನೀಡಲು ಬರಲಿದೆ ರಿಲಯನ್ಸ್ ಜಿಯೋ ಮೀಟ್

ಶನಿವಾರ, 2 ಮೇ 2020 (09:05 IST)
ನವದೆಹಲಿ: ಲಾಕ್ ಡೌನ್ ವೇಳೆ ಕಚೇರಿ ಕೆಲಸ ಮಾಡಲು ಅನೇಕ ಕಂಪನಿಗಳಿಗೆ ಜೂಮ್ ಆಪ್ ವರದಾನವಾಗಿತ್ತು. ಆದರೆ ಈ ಆಪ್ ಉದ್ದೇಶ ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಕೇಂದ್ರ ನಿರ್ಬಂಧ ವಿಧಿಸಿದ ಬೆನ್ನಲ್ಲೇ ರಿಲಯನ್ಸ್ ಸಂಸ್ಥೆ ಇದೀಗ ಜಿಯೋ ಮೀಟ್ ಎನ್ನುವ ಆಪ್ ಲಾಂಚ್ ಮಾಡಲು ಮುಂದೆ ಬಂದಿದೆ.


ಗುಂಪಾಗಿ ವಿಡಿಯೋ ಕಾನ್ಫರೆನ್ಸ್ ನಡೆಸಲು ಅವಕಾಶ ಒದಗಿಸುವ ಜಿಯೋ ಮೀಟ್ ಆಪ್ ಲಾಂಚ್ ಮಾಡಲು ರಿಲಯನ್ಸ್ ಸಿದ್ಧತೆ ನಡೆಸಿದೆ. ಈಗಾಗಲೇ ಇದರ ಬಗ್ಗೆ ಕಾರ್ಯೋನುಖವಾಗಿದೆ ಎನ್ನಲಾಗಿದೆ.

ವೆಬ್ ಬ್ರೌಸರ್, ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್ ಗಳಿಗೆ ಲಭ್ಯವಾಗುವಂತೆ ಆಪ್ ಡೆವಲಪ್ ಮಾಡಲಾಗುತ್ತಿದೆಯಂತೆ. ಈ ಆಪ್ ಟಾಬ್ಲೆಟ್ ಮತ್ತು ಮೊಬೈಲ್ ಗಳಲ್ಲಿ ಲಭ್ಯವಾಗಲಿದೆ. ಕೆಲವೇ ದಿನಗಳಲ್ಲಿ ಭಾರತೀಯರಿಗೆ ಈ ಸೇವೆ ಒದಗಿಸುವುದಾಗಿ ರಿಲಯನ್ಸ್ ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ