ಫ್ರೀಡಂ 251 ಮೊಬೈಲ್‍ನಿಂದ ಹೊಸ ಕಂಪನಿ

ಶುಕ್ರವಾರ, 16 ಡಿಸೆಂಬರ್ 2016 (10:52 IST)
ಅತ್ಯಂತ ಕಡಿಮೆ ಬೆಲೆಗೆ ರೂ. 251ಕ್ಕೆಲ್ಲಾ ಆಧುನಿಕ ಸ್ಮಾರ್ಟ್‌ಫೋನ್ ಕೊಡ್ತೀವಿ ಎಂದು ಕೋಟ್ಯಾಂತರ ಜನರನ್ನು ನಂಬಿಸಿದ್ದ ರಿಂಗಿಂಗ್ ಬೆಲ್ಸ್ ಕಂಪನಿ ಬಾಗಿಲು ಹಾಕಿದ್ದು ಗೊತ್ತೇ ಇದೆ. ಇದೀಗ ಈ ಕಂಪನಿ ಮಾಲೀಕರು ಇನ್ನೊಂದು ಕಂಪನಿ ತೆರೆಯುತ್ತಿದ್ದಾರೆ. 
 
ಫ್ರೀಡಂ 250 ಮೊಬೈಲನ್ನು ಆಗ ಕೊಡ್ತೀವಿ ಈಗ ಕೊಡ್ತೀವಿ ಎಂದು ಹೇಳುತ್ತಲೇ ಬಂದಿದ್ದ ನೋಯ್ಡಾ ಮೂಲದ ಈ ಕಂಪನಿಯಲ್ಲಿ ಕೋಟ್ಯಾಂತರ ಜನ ತಮ್ಮ ಹೆಸರುಗಳನ್ನು ರಿಜಿಸ್ಟರ್ ಮಾಡಿಕೊಂಡಿದ್ದರು. ಆದರೆ ಕಡೆಗೆ ಕಂಪನಿ ಸದ್ದಿಲ್ಲದೆ ಬಾಗಿಲು ಹಾಕಿಕೊಂಡಿದ್ದನ್ನು ಟೆಲಿ ಅನಲೈಸ್ ಹೇಳಿತ್ತು.
 
ಇದೀಗ ಕಂಪನಿ ಮತ್ತೆ ಸದ್ದು ಮಾಡುತ್ತಿದ್ದು, ಎಂಡಿಎಂ ಎಲಕ್ಟ್ರಾನಿಕ್ಸ್ ಪ್ರೈ. ಲಿ. ಹೆಸರಿನೊಂದಿಗೆ ಹೊಸ ಕಂಪನಿ ಶುರು ಮಾಡಿದೆಯಂತೆ. ರಿಂಗಿಂಗ್ ಬೆಲ್ಸ್‌ಗೆ ಎಂಡಿಯಾಗಿದ್ದ ಮೋಹಿತ್ ಗೋಯಲ್ ಹೊಸ ಕಂಪನಿಯಲ್ಲಿ ಅದೇ ಹುದ್ದೆಯಲ್ಲಿ ಮುಂದುವರೆಯುತ್ತಿದ್ದಾರೆ.
 
ರಿಂಗಿಂಗ್ ಬೆಲ್ಸ್‌ನಲ್ಲಿ ವಿಶೇಷ ಹುದ್ದೆಗಳಿದ್ದ ಶಶಾಂಕ್ ಗೋಯಲ್, ಅಶೋಕ್ ಚಡ್ಡಾ, ಚದ್ವಾ ಹೊಸ ಕಂಪನಿಗೆ ಅಡಿಯಿಟ್ಟಿದ್ದಾರೆ. ಆದರೆ ಹಳೆ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧರ್ನ ಗೋಯಲ್ ಮಾತ್ರ ಇವರೊಂದಿಗಿಲ್ಲ. ಡಿಸೆಂಬರ್ 7ರಂದು ಆರಂಭವಾಗಿರುವ ಈ ಹೊಸ ಕಂಪನಿ ಮೂಲಕವೂ ಎಲೆಕ್ಟ್ರಾನಿಕ್, ಮೊಬೈಲ್ ಉತ್ಪನ್ನಗಳನ್ನು ತಯಾರಿಸಲಾಗುತ್ತಂತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ