ತನ್ನ ಗ್ರಾಹಕರಿಗೆ ಎಚ್ಚರಿಕೆಯೊಂದನ್ನು ನೀಡಿದ ಎಸ್.ಬಿ.ಐ

ಗುರುವಾರ, 14 ಮಾರ್ಚ್ 2019 (07:04 IST)
ನವದೆಹಲಿ : ವಾಟ್ಸಾಪ್ ನಲ್ಲಿ ಬರುವ ಬ್ಯಾಂಕ್ ಗೆ ಸಂಬಂಧಿಸಿದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು. ಒಂದು ವೇಳೆ ಪ್ರತಿಕ್ರಿಯೆ ನೀಡಿದರೆ ಹ್ಯಾಕರ್ ಕೈನಲ್ಲಿ ಸಿಕ್ಕಿಬೀಳುತ್ತೀರಿ ಎಂದು. ಎಸ್.ಬಿ.ಐ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.


ಈ ಹ್ಯಾಕರ್ ಗುಂಪು ಮೊದಲು ಒಟಿಪಿಗೆ ಸಂಬಂಧಿಸಿದ ಮಾಹಿತಿ ನೀಡಿ ಗ್ರಾಹಕರನ್ನು ಎಚ್ಚರಿಸಿದಂತೆ ನಾಟಕವಾಡುತ್ತದೆ. ಗ್ರಾಹಕರ ವಿಶ್ವಾಸ ಗಳಿಸಿದ ಮೇಲೆ ಅಸಲಿ ಒಟಿಪಿ ಕಳುಹಿಸುವಂತೆ ಹೇಳುತ್ತದೆ. ಈ ವಾಟ್ಸಾಪ್ ಸಂದೇಶಗಳು ಲಿಂಕ್ ಜೊತೆ ಬರುತ್ತವೆ. ಬಳಕೆದಾರ ಲಿಂಕ್ ಕ್ಲಿಕ್ ಮಾಡ್ತಿದ್ದಂತೆ ಹ್ಯಾಕರ್ಸ್, ಮೊಬೈಲ್ ನಿಂದ ಒಟಿಪಿ ಕದಿಯುತ್ತಾರೆ.


ಎರಡನೇಯದಾಗಿ ಈ ಗುಂಪು ಬ್ಯಾಂಕ್ ಸಿಬ್ಬಂದಿಯಾಗಿ ಗ್ರಾಹಕರ ಜೊತೆ ಮಾತನಾಡುವ ಮೂಲಕ ಅವ್ರ ವಿಶ್ವಾಸ ಗಳಿಸಿ ಕ್ರೆಡಿಟ್, ಡೆಬಿಟ್ ನವೀಕರಣದ ಮಾತನಾಡಿ ಮಾಹಿತಿ ಪಡೆಯುತ್ತದೆ. ಹಾಗಾಗಿ ಬ್ಯಾಂಕ್ ಗೆ ಸಂಬಂಧಿಸಿದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಎಸ್.ಬಿ.ಐ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ