ಲೋಕ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಮಂಗಳವಾರ, 12 ಮಾರ್ಚ್ 2019 (14:35 IST)
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡ ಬೆನ್ನಲ್ಲೆ ಇದೀಗ ಜನರು ಚುನಾವಣೆ ಬಹಿಷ್ಕಾರದ ಮಾತುಗಳನ್ನು ಆಡುತ್ತಿದ್ದಾರೆ.

ವಿಜಯಪುರದ ವಾರ್ಡ್ ನಂ 16 ಹಮಾಲ ಕಾಲೋನಿ ಜನರಿಗೆ ಗೃಹ ಮಂಡಳಿಯಿಂದ ನಿವೇಶನ ನೀಡಲಾಗಿತ್ತು. 1984 ರಲ್ಲಿ ಜನರಿಗೆ ನಿವೇಶನ ಮಂಜೂರಾದರೂ ಫಲಾನುಭವಿಗಳಿಗೆ ಉತಾರ್ ನೀಡದ ಕಂದಾಯ ಇಲಾಖೆ ಕ್ರಮಕ್ಕೆ ಜನರು ಗರಂ ಆಗಿದ್ದಾರೆ.

ಉತಾರೆ ಹಾಗೂ ಹಕ್ಕು ರಜಿಸ್ಟರ್ ನಲ್ಲಿ ದಾಖಲಾದ ನಂತರ ನಿವೇಶನ ಮೇಲೆ ಸಾಲ ಪಡೆಯಬಹುದು. ಮಂಜೂರಾದ ಭೂಮಿಯಲ್ಲಿ ವಾಸವಿದ್ರೂ ನಿವೇಶನ ಮೇಲೆ ಸಾಲ ಪಡೆಯುವಂತಿಲ್ಲ. ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ ಪಡೆಯಲು ನಿವೇಶನದ ದಾಖಲೆಯನ್ನು ಕೇಳುತ್ತಾರೆ. ಕರ್ನಾಟಕ ಗೃಹ ಮಂಡಳಿಯಿಂದ ಮಂಜೂರಾದ ನಿವೇಶನಗಳ ಉತಾರೆಯಲ್ಲಿ ಹೆಸರು ದಾಖಲು ಮಾಡುವಂತೆ ಒತ್ತಾಯಿಸಿ ಇದೇ 8 ರಿಂದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅಲ್ಲಿನ ಜನರು ಹೇಳಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಳೆದ ಐದು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ಸಿಗದಿದ್ರೆ 12 ಸಾವಿರ ಮತದಾರಿರುವ  ವಾರ್ಡ್ ನಂ. 16 ಜನರಿಂದ ಲೋಕಸಭಾ ಚುನಾವಣೆ ಸಾಮೂಹಿಕ ಬಹಿಷ್ಕಾರ ಹಾಕುತ್ತೇವೆ ಎಂದು ಅಲ್ಲಿನ ಜನರು ಎಚ್ಚರಿಕೆ ನೀಡಿದ್ದಾರೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ