ಐಸಿಐಸಿಐ ಬ್ಯಾಂಕ್ 'ಶೂನ್ಯ ಬ್ಯಾಲೆನ್ಸ್' ಖಾತೆದಾರರಿಗೆ ಶಾಕಿಂಗ್ ನ್ಯೂಸ್

ಬುಧವಾರ, 18 ಸೆಪ್ಟಂಬರ್ 2019 (06:48 IST)
ನವದೆಹಲಿ : ಡಿಜಿಟಲ್ ವ್ಯವಹಾರಕ್ಕೆ ಗ್ರಾಹಕರನ್ನು ಉತ್ತೇಜಿಸಲು ಐಸಿಐಸಿಐ ಬ್ಯಾಂಕ್ ಹೊಸ ಕ್ರಮಗಳನ್ನು ತೆಗೆದುಕೊಂಡಿದೆ.
ಐಸಿಐಸಿಐ ಬ್ಯಾಂಕ್ 'ಶೂನ್ಯ ಬ್ಯಾಲೆನ್ಸ್' ಖಾತೆದಾರರು ತಮ್ಮ ಶಾಖೆಗಳಲ್ಲಿ ಮಾಡುವ ಪ್ರತಿ ನಗದು ವಿತ್ ಡ್ರಾವಲ್ ಮೇಲೆ ರೂ. 100 ರಿಂದ 125 ವರೆಗೆ ಶುಲ್ಕವನ್ನು ವಿಧಿಸಲು ನಿರ್ಧರಿಸಿದೆ. ಜೊತೆಗೆ ತನ್ನ ಕರೆನ್ಸಿ ಮರುಬಳಕೆ ವ್ಯವಸ್ಥೆಗಳ ಮೇಲೆ ಮಾಡುವ ನಗದು ಜಮಾವಣೆ ಮೇಲೂ ಶುಲ್ಕ ವಿಧಿಸಲು ಬ್ಯಾಂಕ್ ನಿರ್ಧರಿಸಿದೆ.


ಅಲ್ಲದೇ ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ನೆಫ್ಟ್, ಆರ್ಟಿಜಿಎಸ್ ಮತ್ತು ಯುಪಿಐ ವಹಿವಾಟುಗಳ ಮೂಲಕ ಫಂಡ್ ವರ್ಗಾವಣೆಯ ಎಲ್ಲಾ ಶುಲ್ಕಗಳನ್ನು ಬ್ಯಾಂಕ್ ತೆಗೆದು ಹಾಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ