ಅಮೆಜಾನ್ ಮತ್ತು ಫ್ಲಿಪ್‌ ಕಾರ್ಟ್‌ ನಂತಹ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಶಾಕಿಂಗ್ ನ್ಯೂಸ್

ಶುಕ್ರವಾರ, 28 ಡಿಸೆಂಬರ್ 2018 (12:25 IST)
ನವದೆಹಲಿ : ಹಬ್ಬ ಹರಿದಿನಗಳಲ್ಲಿ ವಸ್ತುಗಳ ಮೇಲೆ ಆಫರ್ ಹಾಗು ರಿಯಾಯಿತಿಗಳನ್ನು ನೀಡುವುದರ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ ಅಮೆಜಾನ್ ಮತ್ತು ಫ್ಲಿಪ್‌ ಕಾರ್ಟ್‌ ನಂತಹ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಒಂದು ಶಾಕಿಂಗ್ ನ್ಯೂಸ್.


ಇ-ಕಾಮರ್ಸ್ ಕಂಪನಿಗಳು ನೀಡುವ ಆಫರ್ ಮತ್ತು ಹಬ್ಬದ ಮಾರಾಟ ಹೆಸರಿನಲ್ಲಿ ನೀಡುತ್ತಿರುವ ದರ ಕಡಿತ ಮಾರಾಟ ಮತ್ತು ಕಾಂಬಿ ಆಫರ್, ಕ್ಯಾಶ್ ಬ್ಯಾಕ್ ನಿಂದಾಗಿ ಇತರ ವ್ಯಾಪಾರಿಗಳು/ಮಳಿಗೆಗಳಿಗೆ ಭಾರೀ ನಷ್ಟ ಉಂಟಾಗುತ್ತಿದ್ದು, ಈ ಕುರಿತು ಉದ್ಯಮ ಮತ್ತು ವಾಣಿಜ್ಯ ಒಕ್ಕೂಟವು ಯಾವುದೇ ನಿರ್ಬಂಧವಿಲ್ಲದ ದರ ನಿಗದಿಯಿಂದ ಉದ್ಯಮ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸರಕಾರಕ್ಕೆ ದೂರು ಸಲ್ಲಿಸಿದೆ.


ಅಲ್ಲದೇ ಇ-ಕಾಮರ್ಸ್ ಸರಕುಗಳ ಮರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ರೂಪಿಸಿದ ನಿಯಮಗಳನ್ನು ಸಂಸ್ಥೆಗಳು ಪಾಲಿಸದೇ ಬೇಕಾಬಿಟ್ಟಿ ಕೊಡುಗೆ ಮತ್ತು ಮಾರಾಟ ಉತ್ಸವ ಮೂಲಕ ಉತ್ಪನ್ನಗಳ ಮೇಲೆ ದರ ಕಡಿತ ಮಾಡಿ ಮಾರಾಟ ಮಾಡುತ್ತಿವ ಎನ್ನಲಾಗಿದೆ. ಈ ಹಿನ್ಬಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ಇನ್ನುಮುಂದೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಸಂಸ್ಥೆಗಳು ನೀಡುವ ಭರ್ಜರಿ ರಿಯಾಯಿತಿ ಮತ್ತು ಆಫರ್ ಗಳಿಗೆ ನಿರ್ಬಂಧ ವಿಧಿಸಲಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ