ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಬಳಿ ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದ್ದು 20 ಮಂದಿ ಸಜೀವ ದಹನವಾದ ಧಾರುಣ ಘಟನೆ ನಡೆದಿದೆ.
ಕಾವೇರಿ ಎಂಬ ವೋಲ್ವೋ ಬಸ್ ದುರಂತಕ್ಕೀಡಾಗಿದೆ. ಇಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ. ಬಸ್ ಗೆ ಬೈಕ್ ಢಿಕ್ಕಿಯಾಗಿದ್ದರಿಂದ ಬೆಂಕಿ ಹತ್ತಿಕೊಂಡಿದೆ. ಮುಂಭಾಗಕ್ಕೆ ಹೊಡೆದ ಬೈಕ್ ಬಳಿ ಕೆಳಗಡೆಯಿಂದ ಮುಂದೆ ಸಾಗಿ ಇಂಜಿನ್ ಗೇ ಢಿಕ್ಕಿಯಾಗಿದೆ. ಪರಿಣಾಮ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಬಸ್ ಬೆಂಕಿಗೆ ಆಹುತಿಯಾಗಿದೆ. ಒಟ್ಟು 44 ಪ್ರಯಾಣಿಕರು ಬಸ್ ನಲ್ಲಿದ್ದರು. ಆ ಪೈಕಿ 20 ಮಂದಿ ಸಾವನ್ನಪ್ಪಿದ್ದಾರೆ. ಇನ್ನಿತರರಿಗೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕ ಮಂದಿ ಪ್ರಯಾಣಿಕರು ಹೈದರಾಬಾದ್ ಮೂಲದವರೇ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದೆ. ಆದರೆ ಅಷ್ಟರಲ್ಲಿ ಬಹುತೇಕ ಬಸ್ ಸುಟ್ಟು ಭಸ್ಮವಾಗಿದೆ. ಬೆಳಗಿನ ಜಾವ ಬಹುತೇಕರು ಗಾಢ ನಿದ್ರೆಯಲ್ಲಿದ್ದರು. ಹೀಗಾಗಿ ಏನಾಗುತ್ತಿದೆ ಎಂದು ಪ್ರಯಾಣಿಕರಿಗೂ ಅರಿವೇ ಆಗಿರಲಿಲ್ಲ.
A Kaveri Travels bus from Hyderabad to Bengaluru caught fire near Kurnool early Friday, killing at least 25 passengers. 12 others escaped with injuries. Police suspect the blaze began after a bike hit the buss fuel tank. #Kurnool#BusFire#AndhraPradeshpic.twitter.com/KTwEVZmQY4