ಟ್ರೂಕಾಲರ್ ಜತೆಗೆ ಸ್ನಾಪ್‌ಡೀಪ್ ಮಹತ್ವದ ಒಪ್ಪಂದ

ಶುಕ್ರವಾರ, 3 ಮಾರ್ಚ್ 2017 (15:40 IST)
ಪ್ರಮುಖ ಕಮ್ಯುನಿಕೇಷನ್ ಆಪ್ ಟ್ರೂಕಾಲರ್ ಜತೆಗೆ ಇ-ಕಾಮರ್ಸ್ ಕಂಪೆನಿ ಸ್ನಾಪ್‍ಡೀಲ್ ಗುರುವಾರ ಮಹತ್ವದ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಇಂಟರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್‌ಎಸ್) ಮೂಲಕ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸ್ನಾಪ್‍ಡೀಲ್ ತಿಳಿಸಿದೆ.
 
ಟ್ರೂಕಾಲರ್ ಆಪ್ ಇರುವ ಗ್ರಾಹಕರು ಸ್ನಾಪ್‌ಡೀಲ್‌ನಲ್ಲಿ ಖರೀದಿಸಿದಾಗ ಡೆಲಿವರಿ ವೆರಿಫಿಕೇಷನ್ ಕರೆಗಳನ್ನು ಶೀಘ್ರವಾಗಿ ಗುರುತಿಸಲು ಸಾಧ್ಯವಾಗಲಿದೆ. ಡೆಲಿವರಿ ಸಮಯದಲ್ಲಿ ಉಂಟಾಗುತ್ತಿರುವ ಗೊಂದಲಗಳು ಇನ್ನು ಮುಂದೆ ಇರಲ್ಲ ಎಂದು ಕಂಪೆನಿ ಭಾವಿಸಿದೆ. 
 
ತಮ್ಮ ಬಳಕೆದಾರರು ಸ್ನಾಪ್‌ಡೀಲ್‌ನಿಂದ ಬರುವ ಮುಖ್ಯವಾದ ಕರೆಗಳನ್ನು ಮಿಸ್ ಆಗದಂತೆ ಟ್ರೂಕಾಲರ್ ಉಪಯೋಗಕ್ಕೆ ಬರುತ್ತದೆಂದು ಕಂಪೆನಿ ಮುಖ್ಯ ಗ್ರಾಹಕ ಅನುಭವಿ ಅಧಿಕಾರಿ ಜಯಂತ್ ಸೂದ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ