Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಮತ್ತಷ್ಟು ಬೆಲೆ ಏರಿಕೆ
ಬೆಳೆಗಾರರ ನಿರೀಕ್ಷೆಯಂತೇ ಸತತ ಎರಡನೇ ದಿನವೂ ಅಡಿಕೆ ಬೆಲೆ ಏರಿಕೆಯಾಗಿರುವುದು ಗಮನಾರ್ಹ. ಕಳೆದ ಮೂರು-ನಾಲ್ಕು ದಿನಗಳಿಂದ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೆ ನಿನ್ನೆ ಮತ್ತು ಇಂದು ಅಡಿಕೆ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹೊಸ ಅಡಿಕೆ ಬೆಲೆ ನಿನ್ನೆ 470 ರೂ.ಗಳಿದ್ದಿದ್ದು ಇಂದು 10 ರೂ. ಏರಿಕೆಯಾಗಿ 480 ರೂ.ಗಳಾಗಿವೆ. ಹಳೆ ಅಡಿಕೆ ಬೆಲೆ ನಿನ್ನೆ ಗರಿಷ್ಠ 500 ರೂ.ಗಳಷ್ಟಿತ್ತು. ಇಂದು 10 ರೂ. ಏರಿಕೆಯಾಗಿದ್ದು 510 ರೂ.ಗೆ ಬಂದು ತಲುಪಿದೆ. ಇಂದು ಡಬಲ್ ಚೋಲ್ ಬೆಲೆಯಲ್ಲೂ 10 ರೂ. ಏರಿಕೆಯಾಗಿದ್ದು 510 ರೂ.ಗಳಾಗಿವೆ.
ಹೊಸ ಫಟೋರ ದರ 370 ರೂ.ಗಳಷ್ಟಿತ್ತು ಇದೀಗ 5 ರೂ. ಇಳಿಕೆಯಾಗಿ 370 ರೂ. ಗಳಾಗಿವೆ. ಆದರೆ ಹಳೆ ಫಟೋರ ದರ 375 ರೂ.ಗಳಷ್ಟೇ ಇದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 10 ರೂ.ಗಳಷ್ಟು ಏರಿಕೆಯಾಗಿದ್ದು 260 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲಿ 10 ರೂ.ಗಳಷ್ಟು ಏರಿಕೆಯಾಗಿದ್ದು ತಲಾ 315 ರೂ.ಆಗಿದೆ.
ಕಾಳುಮೆಣಸು ದರ
ಆದರೆ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಕಾಳುಮೆಣಸು ಬೆಳೆಗಾರರಿಗೆ ಮಾತ್ರ ಮತ್ತೆ ನಿರಾಸೆಯಾಗಿದೆ. ಇಂದು ಮತ್ತೆ 5 ರೂ. ಇಳಿಕೆಯಾಗಿದ್ದು 665 ರೂ.ಗಳಾಗಿದೆ. ಇನ್ನು ಒಣಕೊಬ್ಬರಿ ಬೆಲೆಯೂ ಯಥಾಸ್ಥಿತಿಯಲ್ಲಿದ್ದು ಗರಿಷ್ಠ 190 ರೂ.ಗಳಷ್ಟಾಗಿದೆ.