ಭಾರತದ ಮಾರುಕಟ್ಟೆಗೆ ಸೋನಿ ಎಕ್ಸ್‌ಪೇರಿಯಾ ಎಕ್ಸ್‌ಎ ಡ್ಯುಯಲ್ ಬಿಡುಗಡೆ!

ಶುಕ್ರವಾರ, 24 ಜೂನ್ 2016 (14:19 IST)
ಘೋಷಣೆಯಾದ ಒಂದು ವಾರದ ಅವಧಿಯಲ್ಲೇ ಸೋನಿ ಎಕ್ಸ್‌ಪೇರಿಯಾ ಎಕ್ಸ್‌ಎ ಡ್ಯುಯಲ್ ಆವೃತ್ತಿಯ ಸ್ಮಾರ್ಟ್‌ಪೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಹೊಂದಿದೆ. 
 
ಸೋನಿ ಸಂಸ್ಥೆ, ಈ ತಿಂಗಳ ಆರಂಭದಲ್ಲಿ ನಡೆದ ಸಮಾರಂಭದಲ್ಲಿ ಸೋನಿ ಎಕ್ಸ್‌ಪೇರಿಯಾ ಎಕ್ಸ್‌ಎ ಡ್ಯುಯಲ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಜೂನ್ ತಿಂಗಳ ಮೂರನೇಯ ವಾರದ ಅವಧಿಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತ್ತು. 
 
ಸೋನಿ ಎಕ್ಸ್‌ಪೇರಿಯಾ ಎಕ್ಸ್‌ಎ ಡ್ಯುಯಲ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಗ್ರಾಹಕರಿಗೆ 20,990 ರೂಪಾಯಿಗಳಲ್ಲಿ ಅಮೆಜಾನ್ ಮಾರುಕಟ್ಟೆಯಲ್ಲಿ ಮತ್ತು ದೇಶದ ಎಲ್ಲ ಅಧಿಕೃತ ಮಳಿಗೆಯಲ್ಲೂ ಲಭ್ಯವಾಗಲಿದೆ.
 
ಸೋನಿ ಎಕ್ಸ್‌ಪೇರಿಯಾ ಎಕ್ಸ್‌ಎ ಡ್ಯುಯಲ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಆಂಡ್ರಾಯ್ಡ್ 6.0 ಮಾರ್ಷ್ಮ್ಯಾಲೋ ವೈಶಿಷ್ಟ್ಯ ಹೊಂದಿದೆ. ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 720x1280 ಪಿಕ್ಸೆಲ್ ಜೊತೆಗೆ 5 ಇಂಚ್ ಎಚ್‌ಡಿ ಸ್ಕ್ರೀನ್, 2 ಜಿಬಿ ರ್ಯಾಮ್ ಜೊತೆಗೆ ಮೀಡಿಯಾ ಟೆಕ್ ಎಮ್‌ಟಿ6755 ಪ್ರೊಸೆಸರ್ ಮತ್ತು 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. 
 
ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಎಕ್ಸ್‌ಮೊರ್ ಆರ್‌ಎಸ್ ಮೊಬೈಲ್ ಸೆನ್ಸಾರ್, ಹೈಬ್ರಿಡ್ ಆಟೋಫೋಕಸ್ ಮತ್ತು ಎಲ್‌ಇಡಿ ಫ್ಲ್ಯಾಶ್ ಜೊತೆಗೆ 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 8 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದ್ದು, 2300ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ