ಶೀಘ್ರದಲ್ಲಿ ಬಿಎಸ್‌ಎನ್‌ಎಲ್‌ನಿಂದ ಜೀವಿತಾವಧಿ ಉಚಿತ ವೈಸ್ ಪ್ಲ್ಯಾನ್

ಮಂಗಳವಾರ, 27 ಸೆಪ್ಟಂಬರ್ 2016 (16:02 IST)
ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶವಾದ ಟೆಲಿಕಾಂ ಕಂಪೆನಿಗಳಲ್ಲಿ ನಡುಕ ಹುಟ್ಟಿಸಿರುವುದು ಸಂಶಯಾತೀತ. ಇತರ ಟೆಲಿಕಾಂ ಕಂಪೆನಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಗ್ರಾಹಕರಿಗೆ ಬಂಪರ್ ಆಫರ್‌ಗಳನ್ನು ಕೊಡುವ ಅನಿವಾರ್ಯತೆ ಎದುರಾಗಿದೆ. 
 
ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಮುಂದಾದ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪೆನಿ, ಜನೆವರಿ 2017 ರಿಂದ ಗ್ರಾಹಕರಿಗೆ ಜೀವಿತಾವಧಿ ಉಚಿತ ವೈಸ್ ಪ್ಲ್ಯಾನ್ ನೀಡಲು ಮುಂದಾಗಿದೆ. 
 
ರಿಲಯನ್ಸ್ ಜಿಯೋದ 149 ರೂಪಾಯಿಗಳ ಪ್ರವೇಶ ದರ ಪ್ಲ್ಯಾನ್‌ಗೆ ಸೆಡ್ಡುಹೊಡೆಯಲು ಉಚಿತ ವೈಸ್ ಪ್ಲ್ಯಾನ್ ಯೋಜನೆ ಸೂಕ್ತವಾಗಿದೆ ಎಂದು ಬಿಎಸ್‌ಎನ್‌ಎಲ್ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವಾ ತಿಳಿಸಿದ್ದಾರೆ. 
 
ಏತನ್ಮಧ್ಯೆ, ಜಿಯೋ ಆಫರ್‌ಗಳು ಕೇವಲ 4ಜಿ ಗ್ರಾಹಕರಿಗೆ ಸೀಮಿತವಾಗಿವೆ. ಆದರೆ, ಬಿಎಸ್ಎನ್‌ಎಲ್ 2ಜಿ, 3ಜಿ ಮತ್ತು 4ಜಿ ನೆಟ್‌ವರ್ಕ್‌ಗಳಿಗೂ ಆಫರ್‌ಗಳು ಲಭ್ಯವಿವೆ.
 
ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆ ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಕೇರಳ, ಹರಿಯಾಣಾ, ಓರಿಸ್ಸಾ ಮತ್ತು ಪಂಜಾಬ್ ರಾಜ್ಯಗಳಲ್ಲಿ ಜನಪ್ರಿಯತೆ ಪಡೆದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ