ಸುಮಾರು 100 ವಿಮಾನಗಳಿಗೆ ಸ್ಪೈಸ್ ಜೆಟ್ ಆದೇಶ

ಶುಕ್ರವಾರ, 13 ಜನವರಿ 2017 (11:43 IST)
ಸಾಕಷ್ಟು ಗುದ್ದಾಟದ ಬಳಿಕ ಹೊಸ ವಿಮಾನಗಳನ್ನು ಕೊಳ್ಳಲು ಸ್ಪೈಸ್ ಜೆಟ್ ಮುಂದಾಗಿದೆ. ಸುಮಾರು 90ರಿಂದ 100 ಹೊಸ ವಿಮಾನಗಳನ್ನು ಅಮೆರಿಕಾ ಮೂಲದ ಬೋಯಿಂಗ್ ಸ್ಪೈಸ್ ಜೆಟ್ ಜತೆಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿದೆ ಎನ್ನುತ್ತವೆ ಮೂಲಗಳು.
 
ಒಂದೊಂದು ವಿಮಾನಕ್ಕೆ ಸುಮಾರು ರೂ.600 ಕೋಟಿ (9 ಕೋಟಿ ಡಾಲರ್) ವೆಚ್ಚವಾಗಲಿದೆ. ಒಟ್ಟಾರೆ ಈ ಆರ್ಡರ್ ವೆಚ್ಚ ರೂ.55,000 ಕೋಟಿಯಷ್ಟಾಗಬಹುದು ಎನ್ನುತ್ತಿವೆ ಕಂಪೆನಿ ಮೂಲಗಳು. ಸದ್ಯಕ್ಕೆ ಸ್ಪೈಸ್ ಜೆಟ್ ಬಳಿ ಕೇವಲ 47 ವಿಮಾನಗಳಿವೆ. 
 
ಶೀಘ್ರದಲ್ಲೇ ಸ್ಪೈಸ್ ಜೆಟ್ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಈ ಬಗ್ಗೆ ಪ್ರಕಟಣೆ ಮಾಡುವ ನಿರೀಕ್ಷೆ ಇದೆ. ಅತ್ಯಂತ ಕಡಿಮೆ ಬೆಲೆಯ ಏರ್‌ಲೈನ್ ಎಂಬ ಹೆಗ್ಗಳಿಕೆಗೆ ಸ್ಪೈಸ್ ಜೆಟ್ ಪಾತ್ರವಾಗಿದ್ದು, ಇದರ ಮುಖ್ಯ ಕಚೇರಿ ಗುರಗಾಂಗ್ ನಲ್ಲಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ದೇಶದ ನಾಲ್ಕನೇ ಅತಿದೊಡ್ಡ ಏರ್‌ಲೈನ್ ಇದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ