ಚಿನ್ನದ ಧಾರಣೆ 2014ರಿಂದೀಚೆಗೆ ಅತ್ಯಧಿಕ: 10 ಗ್ರಾಂ.ಗಳಿಗೆ 30,350 ರೂ.

ಶನಿವಾರ, 7 ಮೇ 2016 (18:04 IST)
ಎರಡನೇ ದಿನವೂ ಚಿನಿವಾರ ಪೇಟೆಯಲ್ಲಿ  ಚಿನ್ನದ ಧಾರಣೆ 225 ರೂ. ಏರಿಕೆಯಾಗಿ 10 ಗ್ರಾಮ್‌‍ಗಳಿಗೆ 30, 350 ರೂ. ತಲುಪಿದೆ. ಇದು 2014ರ ಮೇ 10ರಿಂದೀಚೆಗೆ ಅತ್ಯಧಿಕ ದರವಾಗಿದೆ. ವಿದೇಶದಲ್ಲಿ ದೃಢವಾದ ಪ್ರವೃತ್ತಿಯಿಂದ ಹಾಗೂ ವಿವಾಹ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿ ಆಭರಣ ವ್ಯಾಪಾರಿಗಳು ಹೆಚ್ಚು ಖರೀದಿ ಮಾಡಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ
ಬೆಳ್ಳಿ ಕೂಡ 510 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 41, 550 ರೂ. ತಲುಪಿದೆ. ಕೈಗಾರಿಕೆ ಘಟಕಗಳು ಮತ್ತು ನಾಣ್ಯ ತಯಾರಕರ ಖರೀದಿ ಭರಾಟೆಯಿಂದ ಈ ಬೆಳವಣಿಗೆ ಉಂಟಾಗಿದೆ.
 
ರಾಷ್ಟ್ರ ರಾಜಧಾನಿಯಲ್ಲಿ 99.9% ಮತ್ತು 99.5% ಶುದ್ಧತೆಯ ಚಿನ್ನವು 225 ರೂ. ಏರಿಕೆಯಾಗಿ ಪ್ರತಿ 10 ಗ್ರಾಂ.ಗೆ 30, 350 ಮತ್ತು 30, 200 ರೂ. ತಲುಪಿದೆ. 
ಚಿನ್ನದ ನಾಣ್ಯಗಳು 8 ಗ್ರಾಂ.ಗಳ ಪ್ರತಿ ನಾಣ್ಯಕ್ಕೆ 23, 300 ರೂ.ನಲ್ಲಿ ಸ್ಥಿರವಾಗಿದೆ. 

ವೆಬ್ದುನಿಯಾವನ್ನು ಓದಿ