ಬ್ಲಾಕ್‌ಬೆರ್ರಿ ಫೋನ್ ಮತ್ತೆ ಮಾರುಕಟ್ಟೆಗೆ ಎಂಟ್ರಿ

ಮಂಗಳವಾರ, 27 ಡಿಸೆಂಬರ್ 2016 (08:27 IST)
ಸ್ಮಾರ್ಟ್‍ಫೊನ್ ಮಾರುಕಟ್ಟೆಯಲ್ಲಿ ಬ್ಲಾಕ್‌ಬೆರ್ರಿಗೆ ವಿಶೇಷವಾದಂತ ಸ್ಥಾನ ಇದೆ. ಆದರೆ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದ್ದು, ಬೇಡಿಕೆ, ಲಾಭ ಹಳ್ಳಹಿಡಿದಿದ್ದರಿಂದ ಸ್ವತಃ ಸ್ಮಾರ್ಟ್‍ಫೋನ್‍ ತಯಾರಿಸುವುದನ್ನು ಕೆಲದಿನಗಳ ಮಟ್ಟಿಗೆ ನಿಲ್ಲಿಸಿತ್ತು ಬ್ಲಾಕ್‌ಬೆರ್ರಿ ಕಂಪನಿ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ.
 
ಆದರೆ ಬ್ಲಾಕ್‌ಬೆರ್ರಿ ಫೋನ್‌ಗಳನ್ನು ಇಷ್ಟಪಡುವವರು ಈಗಲೂ ಸಾಕಷ್ಟು ಮಂದಿಇದ್ದಾರೆ. ಅಂತವರಿಗಾಗಿ ಇಲ್ಲಿ ನೋಡಿ ಶುಭವಾರ್ತೆ. ಬ್ಲಾಕ್‌ಬೆರ್ರಿ ಬ್ರಾಂಡ್‍ನ ಹೊಸ ಸ್ಮಾರ್ಟ್‌ಫೋನ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಡುವುದಾಗಿ ಚೀನಾ ಸಂಸ್ಥೆ ಟಿಸಿಎಲ್ ಹೆಳಿದೆ.
 
ಜನವರಿ 5ರಿಂದ 8ರ ನಡುವೆ ನಡೆಯಲಿರುವ ಸಿಇಎಸ್ 2017ರಲ್ಲಿ ಬ್ಲಾಕ್‌ಬೆರ್ರಿ ಬ್ರಾಂಡೆಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುವುದಾಗಿ ಟಿಸಿಎಲ್ ಸಂಸ್ಥೆ ಹೇಳಿದೆ. ಲೈಸೆನ್ಸ್, ಡಿಸೈನ್, ತಯಾರಿಕೆ, ಮಾರಾಟದ ಜೊತೆಗೆ ಗ್ರಾಹಕರಿಗೆ ಸೇವೆಗಳನ್ನು ಸಲ್ಲಿಸಲು ವಾರದ ಹಿಂದೆ ಬ್ಲಾಕ್‌ಬೆರ್ರಿ ಜೊತೆಗೆ ಟಿಸಿಎಲ್ ದೀರ್ಘಕಾಲದ ಒಪ್ಪಂದ ಮಾಡಿಕೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ