ಔಷಧಿ ಮಾಲೀಕರು ಹಾಗೂ ಉತ್ಪಾದಕರಿಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ ಬಿಗ್ ಶಾಕ್

ಶುಕ್ರವಾರ, 14 ಸೆಪ್ಟಂಬರ್ 2018 (11:30 IST)
ನವದೆಹಲಿ : ಕೇಂದ್ರ ಆರೋಗ್ಯ ಸಚಿವಾಲಯ ಔಷಧಿ ಮಾಲೀಕರು ಹಾಗೂ ಉತ್ಪಾದಕರಿಗೆ ಬಿಗ್ ಶಾಕ್ ವೊಂದನ್ನು ನೀಡಿದೆ.
ಅದೇನೆಂದರೆ ಕೇಂದ್ರ ಆರೋಗ್ಯ ಸಚಿವಾಲಯ 328 ಫಿಕ್ಸ್ಡ್ ಡೋಸ್ ಔಷಧಿಗಳನ್ನು ನಿಷೇಧ ಮಾಡುವ ಆದೇಶ ಹೊರಡಿಸಿದೆ.

ನೋವು ನಿವಾರಕ ಸ್ಯಾರಿಡಾನ್, ಚರ್ಮದ ಕ್ರೀಮ್‌ ಪ್ಯಾಂಡರ್ಮ್, ಡಯಾಬಿಟಿಸ್ ಡ್ರಗ್ ಗ್ಲುಕೋನಾರ್ಮ್ ಪಿಜಿ ಸೇರಿ ಪ್ರಮುಖ ಡೋಸ್‌, ಕ್ರೀಮ್‌ಗಳು ಕೂಡ ನಿಷೇಧಕ್ಕೆ ಒಳಗಾಗಿದ್ದಾವೆ. ಈಗಿನಿಂದಲೇ ಈ ಔಷಧಿಗಳ ತಯಾರಿಕೆ, ವಿತರಣೆ, ಮಾರಾಟ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ


ಈ ಬ್ಯಾನ್‌ನಿಂದಾಗಿ ಸುಮಾರು 6 ಸಾವಿರ ಬ್ರ್ಯಾಂಡ್‌ಗಳಿಗೆ ನಿಷೇಧದ ತೊಂದರೆಯಾಗಲಿದ್ದು, ಹಾಗೇ ಔಷಧ ಮಾರುಕಟ್ಟೆಗೆ 2500 ಕೋಟಿ ರೂ. ಗಳಷ್ಟು ನಷ್ಟವಾಗಲಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ