ತಿಂಗಳ ಪಿಂಚಣಿ ಮೊತ್ತ ದ್ವಿಗುಣಗೊಳಿಸಲು ಕೇಂದ್ರದಿಂದ ಚಿಂತನೆ
ಬುಧವಾರ, 13 ಜೂನ್ 2018 (20:31 IST)
ನವದೆಹಲಿ: ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ತಿಂಗಳ ಪಿಂಚಣಿ ಮೊತ್ತವನ್ನು ದ್ವಿಗುಣಗೊಳಿಸಲು ಚಿಂತನೆ ನಡೆಸುತ್ತಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಪಿಂಚಿಣಿ ಮೊತ್ತವನ್ನು ಈಗಿರುವ 5000 ರೂ.ಗಳಿಂದ 10,000 ರೂ.ಗಳಿಗೆ ಹೆಚ್ಚಿಸಲು ಸರಕಾರಕ್ಕೆ ಶಿಫಾರಸು ಮಾಡಿದೆ. ಇದನ್ನು ಕೇಂದ್ರ ಸರಕಾರ ಕೂಡ ಪರಿಶೀಲನೆ ನಡೆಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಸೇವಾ ಇಲಾಖೆಯ ಜಂಟಿ ಕಾರ್ಯದರ್ಶಿ ಮದ್ನೇಶ್ ಕುಮಾರ್ ಮಿಶ್ರಾ, ‘ಪಿಂಚಣಿ ಮೊತ್ತ ಹೆಚ್ಚಿಸುವ ಪ್ರಸ್ತಾಪ ನಮ್ಮ ಮುಂದಿದ್ದು, ಸಕ್ರಿಯ ಪರಿಶೀಲನೆಯಲ್ಲಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ