ಈ ಮೊಬೈಲ್ ನಲ್ಲಿ ಗೂಗಲ್ ಆ್ಯಪ್ ಗಳು ಯಾವುದು ಸಿಗುವುದಿಲ್ಲವಂತೆ

ಮಂಗಳವಾರ, 21 ಮೇ 2019 (06:41 IST)
ನವದೆಹಲಿ : ಮೊಬೈಲ್ ಅಂದ ಮೇಲೆ ಗೂಗಲ್ ಪ್ಲೇ, ಗೂಗಲ್‍ ಪ್ಲೇ ಸ್ಟೋರ್, ಜಿ ಮೇಲ್‍, ಗೂಗಲ್‍ ಮ್ಯಾಪ್‍ ಹಾಗೂ ಯೂಟೂಬ್‍ ಆಪ್‍ ಗಳು ಇರಲೇಬೇಕು. ಇವುಗಳನ್ನು ಹೊಂದಿರದ ಮೊಬೈಲ್ ಗಳನ್ನು ಯಾರು ಬಳಸಲು ಇಷ್ಟಪಡುವುದಿಲ್ಲ.ಅಂತಹದರಲ್ಲಿ ಇನ್ನುಮುಂದೆ ಈ ಮೊಬೈಲ್ ನಲ್ಲಿ  ಗೂಗಲ್ ಆ್ಯಪ್ ಗಳು ಯಾವುದು ಸಿಗುವುದಿಲ್ಲವಂತೆ.



ಹೌದು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದ ಚೀನಾದ  ಹುವಾವೇ ಸಂಸ್ಥೆಯೊಂದಿಗೆ ಗೂಗಲ್‍ ಸಂಸ್ಥೆ ಸಂಬಂಧ ಕಡಿದುಕೊಂಡಿದೆ. ಈ ಹಿನ್ನಲೆಯಲ್ಲಿ ಹುವಾವೇ ಮೊಬೈಲ್‍ ಗಳಿಗೆ ಗೂಗಲ್ ಪ್ಲೇ, ಗೂಗಲ್‍ ಪ್ಲೇ ಸ್ಟೋರ್, ಜಿ ಮೇಲ್‍, ಗೂಗಲ್‍ ಮ್ಯಾಪ್‍ ಹಾಗೂ ಯೂಟೂಬ್‍ ಆಪ್‍ ಗಳು ಲಭ್ಯವಾಗಲ್ಲ.

 

ಆದರೆ ಗ್ರಾಹಕರು ಸದ್ಯಕ್ಕೆ ಬಳಕೆ ಮಾಡ್ತಿರೋ ಹುವಾವೇ ಸ್ಮಾರ್ಟ್ ಫೋನ್‍ ಗಳಲ್ಲಿ ಗೂಗಲ್ ಆಪ್‍‌ ಗಳು ಲಭ್ಯವಿದೆ. ಆದರೆ ಇನ್ಮುಂದೆ ಬರುವ ಮೊಬೈಲ್‍ ಗಳಲ್ಲಿ ಗೂಗಲ್ ಆ್ಯಪ್ ಗಳು ಸಿಗುವುದಿಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ