ಆರ್ಥಿಕತೆಯ ಪ್ರಗತಿ ದರ ತುಸು ಕುಂಠಿತ

ಬುಧವಾರ, 1 ಫೆಬ್ರವರಿ 2023 (21:38 IST)
ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯ ಪ್ರಗತಿ ದರ ತುಸು ಕುಂಠಿತವಾಗಬಹುದು ಎಂದು IMF ಅಭಿಪ್ರಾಯಪಟ್ಟಿದೆ. ಆದರೆ ಇದೇ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ದರದಲ್ಲಿ ಶೇ 6.8 ರಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಪ್ರಗತಿ ದರವು ಶೇ 6.1ಕ್ಕೆ ಇಳಿಯಬಹುದು ಎಂದು ಅಂದಾಜಿಸಿದೆ. IMF ಮಂಗಳವಾರ ಬಿಡುಗಡೆ ಮಾಡಿದ ವಿಶ್ವ ಹಣಕಾಸು ಮುನ್ನೋಟ ವರದಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಭಾರತದ ಆರ್ಥಿಕ ಪ್ರಗತಿಯೂ ಸೇರಿದಂತೆ ವಿಶ್ವ ವಿತ್ತ ವಿದ್ಯಮಾನದ ಬದಲಾಗುತ್ತಿರುವ ಸ್ಥಿತಿಗತಿ ಕುರಿತು ವಿವರಗಳಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿಶ್ವ ಆರ್ಥಿಕ ಪ್ರಗತಿ ದರವು ಶೇ 2.9ಕ್ಕೆ ಕುಸಿಯಬಹುದು ಎಂದು ವರದಿ ತಿಳಿಸಿದೆ. ಈ ಮೊದಲು ಪ್ರಸಕ್ತ ಹಣಕಾಸು ವರ್ಷದ ಪ್ರಗತಿ ದರವು ಶೇ 3.4 ಇರಬಹುದು ಎಂದು ಅಂದಾಜಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ