ಟ್ರಾಯ್ ಈ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಸುಮಾರು 70 ಮಿಲಿಯನ್ ಗ್ರಾಹಕರು ಏರ್ ಸೆಲ್ ಸೇವೆ ಪಡೆಯುತ್ತಿದ್ದು, ಅಕ್ಟೋಬರ್ 31ರೊಳಗೆ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತೊಂದು ನೆಟ್ ವರ್ಕ್ ಗೆ ಪೋರ್ಟ್ ಮಾಡಿಕೊಳ‍್ಳಬೇಕು. ಇಲ್ಲವಾದರೆ ಅವರ ಮೊಬೈಲ್ ಸಂಖ್ಯೆ ಬಂದ್ ಆಗಲಿರುವುದಾಗಿ ತಿಳಿಸಿದೆ.
2018ರಲ್ಲೇ ಏರ್ ಸೆಲ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದ್ದು, ಆದರೆ ತನ್ನ ಗ್ರಾಹಕರಿಗೆ ಮೊಬೈಲ್ ಸಂಖ್ಯೆಯನ್ನು ಫೋರ್ಟ್ ಮಾಡದೆ ಸೇವೆಯನ್ನು ಒದಗಿಸುವಂತೆ ಟ್ರಾಯ್ ಗೆ ಮನವಿ ಮಾಡಿತ್ತು. ಆದರೆ ಇದೀಗ ಸೇವೆ ಮುಂದುವರಿಯಲು ಪೋರ್ಟ್ ಮಾಡುವುದು ಅನಿವಾರ್ಯ ಎಂದು ಟ್ರಾಯ್ ತಿಳಿಸಿದೆ.