ಕೆಲವೇ ಗಂಟೆಗಳಲ್ಲಿ ಜಿಯೋ ಫೋನ್ ದಾಖಲೆ ಬುಕಿಂಗ್

ಶನಿವಾರ, 26 ಆಗಸ್ಟ್ 2017 (10:44 IST)
ನವದೆಹಲಿ:  ರಿಲಯನ್ಸ್ ಜಿಯೋ 4 ಜಿ ಫೋನ್ ಬುಕಿಂಗ್ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ದಾಖಲೆ ಮಾಡಿದೆ. ಕೆಲವೇ ಗಂಟೆಗಳಲ್ಲಿ ಸುಮಾರು 3 ಮಿಲಿಯನ್ ಮಂದಿ ಫೋನ್ ಗಾಗಿ ಬುಕಿಂಗ್ ಮಾಡಿದ್ದಾರೆಂದು ತಿಳಿದು ಬಂದಿದೆ.

 
ದೆಹಲಿಯ ಮಳಿಗೆಯೊಂದರಲ್ಲಂತೂ ಕೇವಲ 15 ನಿಮಿಷದಲ್ಲಿ 100 ಫೋನ್ ಗಳಿಗೆ ಬುಕಿಂಗ್ ಮಾಡಿದ್ದಾರಂತೆ. ಪ್ರಿ ಬುಕಿಂಗ್ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಗ್ರಾಹಕರು ಬುಕಿಂಗ್ ನಡೆಸಲು ಮುಗಿಬಿದ್ದಿದ್ದರಿಂದ ರಿಲಯನ್ಸ್ ಜಿಯೋ ವೆಬ್ ಸೈಟ್ ಎರರ್ ಸಂದೇಶ ತೋರಿಸುತ್ತಿತ್ತು.

ಇದೀಗ 500 ರೂ. ಪಾವತಿಸಿ ಗ್ರಾಹಕರು ಬುಕಿಂಗ್ ನಡೆಸುತ್ತಿದ್ದಾರೆ. ಫೋನ್ ಕೈಗೆ ಸಿಗುವಾಗ ಉಳಿದ 1000 ರೂ. ಡೆಪಾಸಿಟ್ ಪಾವತಿಸಬೇಕು. ಈ 1500 ರೂ. 36 ತಿಂಗಳ ಬಳಿಕ ಸಂಪೂರ್ಣವಾಗಿ ಗ್ರಾಹಕರಿಗೆ ಸಿಗಲಿದೆ.

ಇದನ್ನೂ ಓದಿ.. ಬೆಡ್ ಕಾಫಿ ಕುಡಿಯುತ್ತೀರಾ? ಹಾಗಿದ್ದರೆ ಈ ಸುದ್ದಿ ಓದಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ