ನಿಮ್ಮ ಫೋನಿನ ಸ್ಪೀಡ್ ಕಡಿಮೆಯಾಗಿದೆಯೇ? ಹಾಗಾದ್ರೆ ಇದನ್ನು ಪ್ರಯತ್ನಿಸಿ

ಶನಿವಾರ, 30 ಏಪ್ರಿಲ್ 2016 (16:28 IST)
ನಿಮ್ಮ ಪೋನ್ ಸ್ಪೀಡ್ ಕಡಿಮೆಯಾಗಿರುವುದರಿಂದ ತೊಂದರೆ ಅನುಭವಿಸುತ್ತಿದ್ದೀರಾ? ಅಥವಾ ನಿಮ್ಮ ಪೋನ್ ಹ್ಯಾಂಗ್ ಔಟ್ ಸಮಸ್ಯೆಯಿಂದ ಬಳಲುತ್ತಿದೀಯಾ?
ನೀವು ಹೊಸ ಸ್ಮಾರ್ಟ್‌ಪೋನ್‌ ಖರೀದಿ ಮಾಡಿದ ಕೆಲವು ದಿನಗಳವರೆಗೆ, ನಿಮ್ಮ ಪೋನ್ ಮೃದುವಾದ ಸೇವೆಯನ್ನು ನೀಡುತ್ತದೆ. ಆದರೆ ದಿನಗಳು ಕಳೆದಂತೆ ನಿಮ್ಮ ಪೋನ್ ಸ್ಪೀಡ್ ಕಡಿಮೆಯಾಗುವುದು ಸಾಮಾನ್ಯವಾಗಿದೆ.
 
ನಿಮ್ಮ ಸ್ಮಾರ್ಟ್‌ಪೋನ್ ವೇಗ ಕಡಿಮೆಯಾಗಿದ್ದರೇ, ಈ ಕ್ರಮಗಳನ್ನು ಅನುಸರಿಸಿ ಪೋನ್ ಸ್ಪೀಡ್‌ನ್ನು ಹೆಚ್ಚಿಸಿಕೊಳ್ಳಿ.
 
ಬ್ಯಾಕ್‌ಗ್ರೌಂಡ್ ಪ್ರಕ್ರಿಯೆಯನ್ನು ನಿಷ್ಕ್ರಿಯಗೊಳಿಸಿ
 
ಪೋನ್‌ ಬ್ಯಾಕ್‌ಗ್ರೌಂಡ್‌ನಲ್ಲಿ ಸಾಕಷ್ಟು ಅಪ್ಲಿಕೇಶನ್‌ಗಳು ಅಪ್‌ಡೇಟ್ ಆಗುತ್ತಿರುವುದು ಪೋನ್ ಕಾರ್ಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಪ್ರಕ್ರಿಯೆಯನ್ನು ನಿಮ್ಮ ಕೈಯಾರೆ ನಿಯಂತ್ರಣ ಮಾಡಬಹುದಾಗಿದೆ.
 
-ನಿಮ್ಮ ಪೋನ್‌ನಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಗೆ ತೆರಳಿ
 
-ಡೆವಲಪರ್ ಆಯ್ಕೆಯನ್ನು ಆಯ್ದುಕೊಳ್ಳಿ.
 
-'ಲಿಮಿಟ್ ಬ್ಯಾಕ್‌ಗ್ರೌಂಡ್ ಪ್ರೋಸೆಸ್' ಆಯ್ಕೆಯನ್ನು ಆಯ್ದುಕೊಳ್ಳಿ.
 
ಕ್ಯಾಚಿಗಳನ್ನು ಕ್ಲಿಯರ್ ಮಾಡಿ
 
ನಿಮ್ಮ ಪೋನ್‌ ಕ್ಯಾಚಿ ಯಾವಾಗಲು ಕ್ಲಿಯರ್ ಆಗಿರಬೇಕು. ಕ್ಯಾಚಿಯಲ್ಲಿರುವ ಜಂಕ್ ಫೈಲ್‌‌ಗಳು ನಿಮ್ಮ ಪೋನ್‌ ಸ್ಪೀಡ್‌ನ್ನು ಕುಗ್ಗಿಸುತ್ತದೆ. ಕ್ಯಾಚಿಗಳನ್ನು ಕ್ಲಿಯರ್ ಮಾಡಲು ನಿರ್ದಿಷ್ಟ ಅಪ್ಲಿಕೇಶನ್‌ಗಳಿವೆ. ಬಳಕೆದಾರರು ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಮ್ಯಾನುವಲಿಯಾಗಿ ಕ್ಯಾಚಿಗಳನ್ನು ಕ್ಲಿಯರ್ ಮಾಡಬಹುದಾಗಿದೆ.
 
- ನಿಮ್ಮ ಪೋನ್‌ನಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಗೆ ತೆರಳಿ
 
- ಸ್ಟೋರೇಜ್ ಡೇಟಾ ಆಯ್ಕೆಯನ್ನು ಆಯ್ದುಕೊಳ್ಳಿ.
 
- ಇಗ, ನಿಮಗೆ ಕ್ಯಾಚಿ ಡೇಟಾ ಆಯ್ಕೆ ಕಾಣಿಸುತ್ತದೆ.
 
- ಓಕೆ ಮೇಲೆ ಕ್ಲಿಕ್ ಮಾಡಿ ಕ್ಯಾಚಿಗಳನ್ನು ಕ್ಲಿಯರ್ ಮಾಡಿ.
 
ಆಂಡ್ರಾಯ್ಡ್ ಆಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ
 
ಬಳಕೆದಾರರ ಸ್ಮಾರ್ಟ್‌ಪೋನ್‌ಗಳಲ್ಲಿ ಅನುಪಯುಕ್ತವಾದ ಅನೇಕ ಅಪ್ಲಿಕೇಶನ್‌ಗಳು ಇನ್‌ಸ್ಟಾಲ್‌ ಆಗಿರುತ್ತವೆ. ಅಂತಹ ಅಪ್ಲಿಕೇಶನ್‌ಗಳನ್ನು ತೊಡೆದು ಹಾಕಲು ಈ ಹಂತಗಳನ್ನು ಪ್ರಯತ್ನಿಸಿ.
 
-ನಿಮ್ಮ ಪೋನ್‌ನಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಗೆ ತೆರಳಿ
 
- ಅಪ್ಲಿಕೇಶನ್ ಮ್ಯಾನೆಜರ್ ಆಯ್ಕೆಯನ್ನು ಆಯ್ದುಕೊಳ್ಳಿ
 
- ನಿಮ್ಮ ಪೋನ್‌ನಲ್ಲಿರುವ ಅಪ್ಲಿಕೇಶನ್ ಪಟ್ಟಿಯನ್ನು ಆಯ್ದುಕೊಳ್ಳಿ
 
- ಅನುಪಯುಕ್ತವಾದ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ.
 
ಅನಿಮೇಷನ್ ನಿಷ್ಕ್ರಿಯಗೊಳಿಸಿ
 
ಪೋನ್‌ಗಳ ಸ್ಪೀಡ್ ಕುಗ್ಗಲು ಲೈವ್ ವಾಲ್ ಪೇಪರ್ಸ್ ಮತ್ತು ಅನಿಮೇಷನ್‌ಗಳು ಕಾರಣವಾಗಿದ್ದು, ಈ ಸೇವೆಗಳನ್ನು ನಿಷ್ಕ್ರಿಯಗೊಳಿಸಲು ಈ ಹಂತಗಳನ್ನು ಪ್ರಯತ್ನಿಸಿ.
 
-ನಿಮ್ಮ ಪೋನ್‌ನಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಗೆ ತೆರಳಿ
 
-ಡೆವಲಪರ್ಸ್ ಆಯ್ಕೆಗೆ ತೆರಳಿ
 
- ಇಲ್ಲಿ ವಿಂಡೋ ಅನಿಮೇಷನ್ ಸ್ಕೇಲ್ ಮತ್ತು ಟ್ರಾನ್ಸಿಶನ್ ಅನಿಮೇಷನ್ ಸ್ಕೇಲ್‌ ಆಯ್ಕೆಗಳು ತೆರೆದುಕೊಳ್ಳುತ್ತದೆ.
 
-  0.5ಎಕ್ಸ್‌ನಲ್ಲಿ ಈ ಆಯ್ಕೆಯನ್ನು ಆಯ್ದುಕೊಳ್ಳಿ. ಇದು ನಿಮ್ಮ ಪೋನ್‌ ಕಾರ್ಯ ವರ್ಧಿಸಲು ಸಹಾಯಕವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ