ನವದೆಹಲಿ: ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಉಬೇರ್ ಸಂಸ್ಥೆ, ದೇಶಿಯ ಪ್ರತಿಸ್ವರ್ಧಿಯಾದ ಓಲಾ ಸಂಸ್ಥೆಗೆ ತೀವ್ರ ಸ್ಪರ್ಧೆ ನೀಡಲು, ಪುಣೆ ಮತ್ತು ಅಹಮದಾಬಾದ್ ಸೇರಿದಂತೆ 10 ನಗರಗಳಲ್ಲಿ 22 ಪ್ರತಿಶತದಷ್ಟು ದರ ಕಡಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತವಾಗಿ ಉಬೆರ್, ಜೋದಪುರ್ ಮತ್ತು ಉದಯ್‌ಪುರ್ ನಗರಗಳಲ್ಲಿ 40 ರೂಪಾಯಿ ಮೂಲ ದರವನ್ನು 25 ರೂಪಾಯಿಗೆ ಇಳಿಕೆ ಮಾಡಿದ್ದು, ಪ್ರತಿ ಕಿಲೋ ಮೀಟರ್ ದರವನ್ನು 8 ರಿಂದ 7 ರೂಪಾಯಿಗೆ ಇಳಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ದರ ಕಡಿತದಿಂದ ವಿಶಾಖಪಟ್ಟಣ, ನಾಗ್ಪುರ್, ಇಂದೋರ್ ಮತ್ತು ಅಹಮದಾಬಾದ್ ನಗರಗಳಲ್ಲಿ 5 ಪ್ರತಿ ಕಿಲೋಮೀಟರ್ ಪ್ರಯಾಣದಲ್ಲಿ 5 ರೂಪಾಯಿ ಕಡಿತಗೊಳಿಸಿದ್ದು, ಪುಣೆ, ಅಜ್ಮೀರ್, ಮಂಗಳೂರು ಮತ್ತು ತಿರುವನಂತಪುರಂ ನಗರಗಳಲ್ಲಿ ಸಂಚಾರ ದಟ್ಟನೆ ಕಡಿಮೆಯಾಗಿದೆ.