ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆಗೆ ಮಣಿದ ಉಬೇರ್

ಮಂಗಳವಾರ, 19 ಏಪ್ರಿಲ್ 2016 (14:39 IST)
ಕ್ಯಾಬ್ ಸೇವೆ ನೀಡುತ್ತಿರುವ ಸಂಸ್ಥೆಗಳು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುವಂತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿರುವ ಖಡಕ್ ಎಚ್ಚರಿಕೆ ಹಿನ್ನೆಲೆಯಲ್ಲಿ, ಆನ್‌ಲೈನ್ ಕ್ಯಾಬ್ ಸೇವೆ ನೀಡುತ್ತಿರುವ ಉಬೇರ್ ಸಂಸ್ಥೆ ಪ್ರಯಾಣದ ಬೆಲೆಯನ್ನು ಕಡಿತಗೊಳಿಸಿದೆ.
ನಮ್ಮ ಜೀವನಾಧಾರ ಪಾಲುದಾರರು ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಸಂಸ್ಥೆ ತಕ್ಷಣವೇ ಪ್ರಸ್ತುತ ವೆಚ್ಚವನ್ನು ಕಡಿತಗೊಳಿಸಿದೆ ಎಂದು ಉಬೇರ್ ಸಂಸ್ಥೆ ಟ್ವೀಟ್ ಮಾಡಿದೆ.
 
ಎರಡನೆಯ ಹಂತದ ಸಮ-ಬೆಸ ಸಂಚಾರ ಪ್ರಯೋಗ ಏಪ್ರಿಲ್ 30 ರಂದು ಮುಗಿಯಲಿದ್ದು, ನಂತರ ಬೆಲೆ ಏರಿಕೆ ಮಾಡುವ ಕುರಿತು ಉಬೇರ್ ಸಂಸ್ಥೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
 
ಉಬೇರ್ ಸಂಸ್ಥೆ, ದೆಹಲಿ ಸರಕಾರ ಮತ್ತು ದೆಹಲಿ ಜನತೆಗೊಸ್ಕರ ಕಾರ್ಯನಿರ್ವಹಿಸಲು ಸಿದ್ಧವಿದೆ ಎಂದು ತಿಳಿಸಿದೆ.
 
ಎರಡನೆಯ ಹಂತದ ಸಮ-ಬೆಸ ಸಂಚಾರ ಪ್ರಯೋಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕ ವಿಧಿಸದಂತೆ ದೆಹಲಿ ಸರಕಾರ ಆನ್‌ಲೈನ್ ಕ್ಯಾಬ್ ಸೇವೆ ನೀಡುತ್ತಿರುವ ಸಂಸ್ಥೆಗಳಿಗೆ ಕಠಿಣ ಸೂಚನೆಯನ್ನು ನೀಡಿತ್ತು. 
 
ಎರಡನೆಯ ಹಂತದ ಸಮ-ಬೆಸ ಸಂಚಾರ ಪ್ರಯೋಗ ನಡಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಕ್ಯಾಬೆ ಸೇವೆ ನೀಡುತ್ತಿರುವ ಸಂಸ್ಥೆಗಳಿಗೆ ಹೆಚ್ಚು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರಯಾಣದ ದರವನ್ನು ಏರಿಕೆ ಮಾಡಿತ್ತು. 

ವೆಬ್ದುನಿಯಾವನ್ನು ಓದಿ