ತಿಂಗಳಲ್ಲಿ ಐಡಿಯಾ, ವೊಡಾಫೋನ್ ವಿಲೀನ ಒಪ್ಪಂದ

ಸೋಮವಾರ, 20 ಫೆಬ್ರವರಿ 2017 (13:32 IST)
ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿ ಉಗಮಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬ್ರಿಟನ್ ಮೂಲದ ವೊಡಾಫೋನ್, ದೇಶದ ಅಗ್ರಗಾಮಿ ಸೆಲ್ಯುಲಾರ್ ಕಂಪೆನಿ ಐಡಿಯಾಗಳ ವಿಲೀನ ಒಪ್ಪಂದ ತಿಂಗಳಲ್ಲಿ ಅಂತಿಮವಾಗಲಿದೆ. ವಿಶ್ವಸನೀಯ ಮೂಲಗಳ ಪ್ರಕಾರ... ಈ ತಿಂಗಳು 24-25ರವರೆಗೆ ಎರಡೂ ಕಂಪೆನಿಗಳು ಕಡ್ಡಾಯವಾಗಿ ಜಾರಿಗೊಳಿಸಬೇಕಿರುವ ವಿಲೀನ ಒಪ್ಪಂದವನ್ನು ಪ್ರಕಟಿಸಲಿವೆ. ಡೀಲ್‌ಗೆ ಸಹಿ ಹಾಕುವುದೊಂದು ಬಾಕಿ ಇದೆ.
 
ಆದರೆ ವಿಲೀನದ ಬಗ್ಗೆ ವೊಡಾಫೋನ್ ಆಗಲಿ, ಐಡಿಯಾ ಆಗಲಿ ಯಾವುದೇ ಸುದ್ದಿ ಪ್ರಕಟಿಸದೆ ಗೌಪ್ಯತೆಯನ್ನು ಕಾಪಾಡಿಕೊಂಡಿವೆ. ವಿಲೀನ ಜವಾಬ್ದಾರಿಯನ್ನು ವೊಡಾಫೋನ್ ತನ್ನ ಭಾರತ ವಿಭಾಗದ ಮುಖ್ಯಸ್ಥ ಮಾರ್ಟಿನ್ ಪೀಟರ್ಸ್‌ಗೆ ಒಪ್ಪಿಸಿದೆ. 
 
ಈ ಡೀಲ್ ಸಾಕಾರವಾದರೆ ಎರಡು ಕಂಪೆನಿಗಳ ವಿಲೀನದ ಮೂಲಕ ಉಗಮಿಸುವ ಕಂಪೆನಿ ದೇಶೀಯ ಟೆಲಿಕಾಂ ಕ್ಷೇತ್ರದಲ್ಲಿ ಶೇ.40ರಷ್ಟು ಪಾಲಿನಿಂದ, 38 ಕೋಟಿ ಗ್ರಾಹಕರೊಂದಿಗೆ ಅತಿದೊಡ್ಡ ಟೆಲ್ಕೋ ಆಗಿ ಜನ್ಮತಾಳಲಿದೆ ಎಂದು ಇಂಡಿಯಾ ರೇಟಿಂಗ್ಸ್ ಊಹಿಸಿದೆ. ಅದೇ ರೀತಿ ಆದಾಯ ರೂ.77,500-80,000 ಕೋಟಿಯಷ್ಟಿರಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ