ಯುವಕರನ್ನು ಆಕರ್ಷಿಸಲು ವೊಡಾಫೋನ್‌ನಿಂದ 'ಯು' ಪ್ಯಾಕ್ ಬಿಡುಗಡೆ

ಶನಿವಾರ, 7 ಮೇ 2016 (11:18 IST)
ಯುವ ಗ್ರಾಹಕರನ್ನು ಆರ್ಕರ್ಷಿಸಲು ಟೆಲಿಕಾಂ ಸಂಸ್ಥೆ  ವೊಡಾಫೋನ್‌, ದೇಶಾದ್ಯಂತ "ಯು" ಪ್ಯಾಕ್ ಹೆಸರಿನ ಹೊಸ ಯೋಜನೆಯನ್ನು ಅನಾವರಣಗೊಳಿಸಿದೆ.  ಈ ಹೊಸ ಯೋಜನೆ ಅಡಿಯಲ್ಲಿ ಇಂಟರ್‌ನೆಟ್, ಕಾಲ್ ಮತ್ತು ವಿಶೇಷ ಅಪ್ಲಿಕೇಶನ್ ಆನಂದಿಸಬಹುದಾಗಿದೆ. 

ದೇಶಾದ್ಯಂತ "ಯು" ಪ್ಯಾಕ್  ಸೇವೆ ಲಭ್ಯವಿದ್ದು, ಶೀಘ್ರದಲ್ಲಿ ಪ್ರಿಪೇಡ್ ಗ್ರಾಹಕರಿಗೆ ಸೇವೆಯನ್ನು ನೀಡಲಿದೆ. ಈಗಾಗಲೇ ವೋಡಾಪೋನ್ ಸಂಪರ್ಕ ಹೊಂದಿರುವ ಗ್ರಾಹಕರು 179 ಮತ್ತು 289 ರೂಪಾಯಿ ರಿಚಾರ್ಜ್ ಮೂಲಕ "ಯು" ಯೋಜನೆಯನ್ನು ಸಕ್ರಿಯಗೊಳಿಸಬಹುದು, ಮತ್ತು ಹೊಸ ಗ್ರಾಹಕರು 89 ರೂಪಾಯಿ ಮೂಲಕ ಈ ಯೋಜನೆಯ ಸೇವೆಯನ್ನು ಆನಂದಿಸಬಹುದಾಗಿದೆ.
 
ಈ ಯೋಜನೆ ಮೊಬೈಲ್ ಡೇಟಾ ಸೇವೆಯನ್ನು ಕೇಂದ್ರೀಕರಿಸುತ್ತದೆ. ಈ ಪ್ಯಾಕ್ ಪ್ರತ್ಯೇಕ 3ಜಿ ಮತ್ತು 4ಜಿ ಡೇಟಾ ಸೇವೆಯನ್ನು ನೀಡುತ್ತದೆ. ಬಳಕೆದಾರರಿಗೆ ನೀಡಿದ ನಗದಿತ ಡೇಟಾ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಂಡ ನಂತರ, 144 ಸಂಖ್ಯೆಗೆ <ಡೇಟಾ ಸಾಲ> ಎಂದು ಸಂದೇಶ ರವಾನಿಸುವ ಮೂಲಕ 20 ರೂಪಾಯಿಗಳಲ್ಲಿ ಎರಡು ದಿನದ ಅವಧಿಗಾಗಿ 60 ಎಮ್‌ಬಿ ಡೇಟಾ ಸೇವೆಯನ್ನು ಸಾಲದ ರೂಪದಲ್ಲಿ ಪಡೆಯಬಹುದು. 
 
"ಯು" ಪ್ಯಾಕ್ ಯೋಜನೆಯ ಮತ್ತೊಂದು ವೈಶಿಷ್ಟ್ಯವೆಂದರೆ, ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಗೆ,  ವೊಡಾಫೋನ್ ಸಂಪರ್ಕ ಹೊಂದಿರುವ 3 ಆಪ್ತರ ಸಂಖ್ಯೆಯನ್ನು ಸೇರಿಸಿಕೊಂಡರೆ, ಪ್ರತಿ ನಿಮಿಷಕ್ಕೆ 20 ಪೈಸೆಯಲ್ಲಿ ಕರೆ ಮಾಡುಬಹುದಾಗಿದೆ. ಗ್ರಾಹಕರು ಈ ಸೇವೆಯನ್ನು ಸಕ್ರಿಯಗೊಳಿಸಲು ಎಡಿಡಿ <ಸ್ಪೇಸ್> ಪ್ರೇಂಡ್<ಸ್ಪೇಸ್> <ಬಡ್ಡಿ ಮೊಬೈಲ್> ಎಂದು ಟೈಪ್ ಮಾಡಿ 199 ಸಂಖ್ಯೆಗೆ ಸಂದೇಶ ರವಾನಿಸಿ.
 
ಬಳಕೆದಾರರು ಈ ಯೋಜನೆ ಅಡಿಯಲ್ಲಿ ವೊಡಾಫೋನ್ ಮ್ಯುಸಿಕ್ ಆಪ್ ಮೂಲಕ ಅನಿಯಮಿತ ಸಂಗೀತವನ್ನು ಆನಂದಿಸಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ