ವೊಡಾಫೋನ್ ನೀಡುತ್ತಿದೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರೂ. 279 ರ ಹೊಸ ಪ್ಲಾನ್

ಸೋಮವಾರ, 8 ಅಕ್ಟೋಬರ್ 2018 (14:21 IST)
ಬೆಂಗಳೂರು : ಜಿಯೋ ಮತ್ತು ಏರ್ಟೆಲ್ ಯೋಜನೆಗಳಿಗೆ ಟಕ್ಕರ್ ನೀಡಲು ವೊಡಾಫೋನ್ ತನ್ನ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರೂ. 279 ರ ಹೊಸ ಪ್ಲಾನ್ ನ್ನು ಆರಂಭಿಸಿದೆ.


ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ, ಎಸ್‌ಎಂಎಸ್ ಸೌಲಭ್ಯ ಸಿಗಲಿದೆ. 3ಜಿ/4ಜಿ ವೇಗದ 4ಜಿಬಿ ಡೇಟಾ ಸಿಗಲಿದೆ. ವೊಡಾಫೋನ್ ಹೊರತುಪಡಿಸಿ ಬೇರೆ ಯಾವ ಕಂಪನಿ ಕೂಡ 84 ದಿನಗಳ ವ್ಯಾಲಿಡಿಟಿಯಲ್ಲಿ 300 ರೂ. ಗಿಂತ ಕಡಿಮೆಯಾಗಿರುವ
ಯಾವುದೇ ಪ್ಲಾನ್ ನೀಡ್ತಿಡುತ್ತಿಲ್ಲ.


ವೊಡಾಫೋನ್ 279 ರೂ. ಪ್ರೀಪೇಯ್ಡ್ ಯೋಜನೆ ಕರ್ನಾಟಕ, ಮುಂಬೈ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಾತ್ರ ಲಭ್ಯವಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ