ಶುದ್ಧ ಕುಡಿಯುವ ನೀರಿಗಾಗಿ ರೈಲ್ವೆ ನಿಲ್ದಾಣಗಳಲ್ಲಿ ವಾಟರ್ ಎಟಿಎಂ
ಬುಧವಾರ, 27 ಜೂನ್ 2018 (16:56 IST)
ನವದೆಹಲಿ: ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಭಾರತೀಯ ರೈಲ್ವೆ ಮುಂದಾಗಿದ್ದು, ದೇಶದ 104 ರೈಲ್ವೆ ನಿಲ್ದಾಣಗಳಲ್ಲಿ ವಾಟರ್ ಎಟಿಎಂಗಳನ್ನು ಅಳವಡಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಐಆರ್‌ಸಿಟಿಸಿ ಈಗಾಗಲೇ ಸ್ವರಾಜ್ ಎಂಬ ಜಲ ತಂತ್ರಜ್ಞಾನದ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. 14 ರಾಜ್ಯಗಳ 104 ರೈಲ್ವೆ ನಿಲ್ದಾಣಗಳಲ್ಲಿ ವಾಟರ್ ಎಟಿಎಂಗಳನ್ನು ಸ್ಥಾಪಿಸಲಾಗಿದೆ.
ಈ ಎಟಿಎಂಗಳಿಂದ ಪ್ರಯಾಣಿಕರಿಗೆ ತಮ್ಮ ನೀರಿನ ಬಾಟಲ್‌ಗಳನ್ನು ತುಂಬಿಸಿಕೊಳ್ಳಲು, ಕಡಿಮೆ ದರದಲ್ಲಿ ಮಿನರಲ್ ವಾಟರ್ ಪಡೆಯಲು ಉಪಯೋಗವಾಗಲಿದೆ. ಒಂದು ಲೀಟರ್ ನೀರಿಗೆ 5 ರೂಪಾಯಿಯಿ. ಪೇಪರ್ ಲೋಟ ಬೇಕಾದರೆ ಹೆಚ್ಚುವರಿಯಾಗಿ 1 ರೂಪಾಯಿ ತೆರಬೇಕಾಗುತ್ತದೆ. ಇನ್ನು ಭೀಮ್ ಆ್ಯಪ್ ಅಥವಾ ಪೇಟಿಎಂ ಮೂಲಕ ಕೂಡ ಹಣ ಪಾವತಿಸಿ ನೀರು ಪಡೆಯಬಹುದು. ಇಲ್ಲವೇ, ಸ್ವರಾಜ್ ಕಾರ್ಡ್ ಕೂಡ ಬಳಕೆಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ