ವಾಟ್ಸಾಪ್‌ನಲ್ಲಿ ಹರಿದಾಡಿದ್ದು 1,400 ಕೋಟಿ!

ಶನಿವಾರ, 7 ಜನವರಿ 2017 (08:23 IST)
ಈಗ ವಾಟ್ಸಾಪ್ ನಲ್ಲಿ ಬೆಳಗ್ಗೆ ಎದ್ದಾಗನಿಂದ ರಾತ್ರಿ ಮಲಗುತನಕ ಹಾಯ್, ಹಲೋ, ಗುಡ್‌ನೈಟ್ ಅಂತ ಸಂದೇಶಗಳು ಹರಿದಾಡುತ್ತಲೇ ಇರುತ್ತವೆ. ಇನ್ನು ಹಬ್ಬದ ದಿನಗಳಲ್ಲಂತೂ ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದಂತೆ ಶುಭಾಶಯಗಳನ್ನು ಹಂಚಿಕೊಳ್ಳುವುದು ನೋಡೇ ಇರ್ತೀವಿ. 
 
ಅದೇ ರೀತಿ ಹೊಸ ವರ್ಷದ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಒಬ್ಬರಿಗೊಬ್ಬರು ಕಳುಹಿಸಿದಕೊಂಡ ಹೊಸ ವರ್ಷದ ಶುಭಾಶಯಗಳ ಸಂಖ್ಯೆ ಎಷ್ಟು ಗೊತ್ತೇ. ಅಕ್ಷರಶಃ 1400 ಕೋಟಿ. ಇದುವರೆಗೂ ಇಷ್ಟೊಂದು ಸಂದೇಶಗಳನ್ನು ಒಂದೇ ದಿನದಲ್ಲಿ ಕಳುಹಿಸಿದ್ದು ಇದೇ ಮೊದಲು ಎಂದು ವಾಟ್ಸಾಪ್ ತಿಳಿಸಿದೆ.
 
ಕಳೆದ ದೀಪಾವಳಿ ಹಬ್ಬಕ್ಕೆ ದೇಶದಲ್ಲಿ 800 ಕೋಟಿ ಸಂದೇಶಗಳು ಹರಿದಾಡಿದ್ದವು. ಆ ದಾಖಲೆಯನ್ನು ಹೊಸ ವರ್ಷ ಅಳಿಸಿಹಾಕಿದೆ. ಹೊಸ ವರ್ಷದ ಸಂದರ್ಭದಲ್ಲಿ ಶುಭಾಶಯಗಳನ್ನು ಹೇಳಲು 310 ಕೋಟಿ ಚಿತ್ರಗಳನ್ನು ಒಬ್ಬರಿಗೊಬ್ಬರು ಕಳುಹಿಸಿಕೊಂಡಿದ್ದಾರೆ. ಇದರಲ್ಲಿ 70 ಕೋಟಿ ಜಿಪ್ ಸಂದೇಶಗಳು, 61 ಕೋಟಿ ವಿಡಿಯೊಗಳು ಎನ್ನುತ್ತಿದೆ ವಾಟ್ಸಾಪ್.  ಒಟ್ಟು ಸಂದೇಶಗಳಲ್ಲಿ ಶೇ.32ರಷ್ಟು ಮಾಧ್ಯಮ ರೂಪದಲ್ಲೇ ಇದ್ದು, ಉಳಿದವರು ಟೆಕ್ಸ್ಟ್ ಸಂದೇಶಗಳು. ವಾಟ್ಸಾಪ್‌ಗೆ ಭಾರತದಲ್ಲಿ ತಿಂಗಳಿಗೆ 16 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ