ಬೆಂಗಳೂರು : ಇತ್ತೀಚೆಗೆ ವಾಟ್ಸಾಪ್ ನಲ್ಲಿ ಫೇಕ್ ಮೆಸೇಜ್ ಗಳ ಹರಿದಾಟ ಹೆಚ್ಚಾಗಿರುವ ಹಿನ್ನಲೆಯಲ್ಲಿ ಇದೀಗ ವಾಟ್ಸಾಪ್ ಕಂಪೆನಿ ತನ್ನ ಗ್ರಾಹಕರಲ್ಲಿ ಮನವಿವೊಂದನ್ನು ಮಾಡಿದ್ದಾರೆ.
ವಾಟ್ಸಾಪ್ ಫೇಕ್ ಮೆಸೇಜ್‍ಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದರೂ ಕೂಡ ಫೇಕ್ ಮೆಸೇಜ್ ಗಳ ಹರಿದಾಟ ಹೆಚ್ಚಾಗಿದೆ. ಅಂಥ ಮೆಸೇಜ್‍ಗಳಿಗೆ ಮರುಳಾಗಿ ಮೋಸಹೋಗಬಾರದು ಎಂದು ತನ್ನ ಗ್ರಾಹಕರಲ್ಲಿ ಮನವಿ ಮಾಡಿದೆ.
ಅಮೆಜಾನ್ ಸಂಸ್ಥೆಯಿಂದಲೇ ಬಂದಂತಿರುವ 5 ಸಾವಿರದ ಮಿಕ್ಸರ್ ಗ್ರೈಂಡರ್ ಕೇವಲ 10 ರೂಪಾಯಿಗೆ, 90 ಸಾವಿರದ ಕ್ಯಾಮೆರಾ ಕೇವಲ 199 ರೂಪಾಯಿಗೆ. ಹೀಗೆ ನಂಬಲಾಗದಷ್ಟು ಕಡಿಮೆ ಬೆಲೆಯ ಆಫರ್ ಇರುವ ಮೆಸೇಜ್‍ಗಳು ವಾಟ್ಸಾಪ್ ನಲ್ಲಿ ಹಲವರಿಗೆ ಬಂದಿವೆ. ಗ್ರಾಹಕರು ಇಂತಹ ಮೆಸೇಜ್ ಗಳ ಬಗ್ಗೆ ಜಾಗರೂಕತೆಯಿಂದ ಇರುವಂತೆ ಕಂಪನಿ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.