ನಟಿ ರಾಧಿಕಾ ಪಂಡಿತ್ ಗೆ ಇಂದು ಸೀಮಂತದ ಸಂಭ್ರಮ

ಭಾನುವಾರ, 18 ನವೆಂಬರ್ 2018 (11:45 IST)
ಬೆಂಗಳೂರು : ಭಾನುವಾರ (ಇಂದು) ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮನೆಯಲ್ಲಿ ಸೀಮಂತದ ಕಾರ್ಯಕ್ರಮ ನಡೆಯಲಿದೆ.

ಹೌದು. ನಟಿ ರಾಧಿಕಾ ಪಂಡಿತ್ ಗೆ ಇದೀಗ 9 ತಿಂಗಳು ತುಂಬಿದೆ. ಆದಕಾರಣ ಕುಟುಂಬದವರೆಲ್ಲಾ ಸೇರಿ ರಾಧಿಕಾ ಪಂಡಿತ್ ಸೀಮಂತಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ. ತಾಜ್ ವೆಸ್ಟ್ ಎಂಡ್ ನಲ್ಲಿ ರಾಧಿಕಾ ಪಂಡಿತ್ ಸೀಮಂತಕ್ಕಾಗಿ ತಯಾರಿ ನಡೆದಿದೆ. ಗೌಡರ ಸಂಪ್ರದಾಯದಂತೆ ಸೀಮಂತ‌ ಶಾಸ್ತ್ರ ನಡೆಯಲಿದೆ.

 

ಈ ಕಾರ್ಯಕ್ರಮಕ್ಕೆ ಸಿನಿಮಾರಂಗದ ಕಲಾವಿದರು ಹಾಗೂ ಸಂಬಂಧಿಕರು ಭಾಗಿಯಾಗಲಿದ್ದು, ಆತ್ಮೀಯರಿಗೆ ಹಾಗೂ ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ