ಗೂಗಲ್ ಪ್ಲೇ ಸ್ಟೋರ್ ನಿಂದ ಪತಂಜಲಿಯ `ಕಿಂಭೊ' ಮೆಸೇಜಿಂಗ್ ಆ್ಯಪ್ ಡಿಲೀಟ್ ಆಗಲು ಕಾರಣವೇನು?
ಶುಕ್ರವಾರ, 1 ಜೂನ್ 2018 (13:16 IST)
ನವದಿಲ್ಲಿ : ಗುರುವಾರ ವಾಟ್ಸ್ ಆ್ಯಪ್ ಗೆ ಸೆಡ್ಡು ಹೊಡೆಯಲು ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆ ಹೊಸ ಮೆಸೇಜಿಂಗ್ ಆ್ಯಪ್ `ಕಿಂಭೊ' ವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಅದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಆ್ಯಪ್ ನ್ನು ತೆಗೆದು ಹಾಕಲಾಗಿದೆ.
ಇದಕ್ಕೆ ಕಾರಣವೆನೆಂಬುದನ್ನು ಇದೀಗ ಪತಂಜಲಿ ವಕ್ತಾರ ಎಸ್ ಕೆ ಟಿಜಾರಾವಾಲಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲ್ಯಾಂಡ್ ಆದ ಮೂರು ಗಂಟೆಯಲ್ಲಿ 1.5 ಲಕ್ಷ ಮಂದಿ ಜನರು ಡೌನ್ ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಹಾಗಾಗಿ ತಾಂತ್ರಿಕ ದೋಷ ಎದುರಾಗಿದೆ. ಎಲ್ಲಾ ಗ್ರಾಹಕರಿಗೂ ಅಭಾರಿಯಾಗಿದ್ದೇವೆ. ಆದಷ್ಟು ಬೇಗ ಕಿಂಬೊಹೋ ಅ್ಯಪ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ