ವೈಝಡ್‌ಎಫ್-ಆರ್‌3 ಸ್ಫೋರ್ಟ್ಸ್ ಬೈಕ್‌ ವಾಪಸ್ ಕರೆಸಿಕೊಳ್ಳಲಿರುವ ಯಮಾಹಾ

ಶುಕ್ರವಾರ, 1 ಜುಲೈ 2016 (14:10 IST)
ವೈಝಡ್‌ಎಫ್-ಆರ್‌3 ಸ್ಫೋರ್ಟ್ಸ್ ಬೈಕ್‌ಗಳ ಕ್ಲಚ್ ವ್ಯವಸ್ಥೆಯಲ್ಲಿ ದೋಷ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಪಾನ್‌ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಯಮಹಾ, 902 ಬೈಕ್‌ಗಳನ್ನು ವಾಪಸ್ ಪಡೆದುಕೊಳ್ಳಲು ನಿರ್ಧರಿಸಿದೆ.
 
ಕೆಲವು ವೈಝಡ್‌ಎಫ್-ಆರ್‌3 ಸ್ಫೋರ್ಟ್ಸ್ ಬೈಕ್‌ಗಳ ಕ್ಲಚ್ ಪ್ಲೇಟ್ ಮತ್ತು ಆಯಿಲ್ ಪಂಪ್‌ಗಳಲ್ಲಿ ದೋಷ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಪಾನ್‌ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಯಮಹಾ, 902 ಬೈಕ್‌ಗಳನ್ನು ವಾಪಸ್ ಪಡೆದುಕೊಳ್ಳಲು ನಿರ್ಧರಿಸಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 
ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗಿರುವ ಬೈಕ್‌ಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ದೋಷಗಳು ವರದಿಯಾಗಿಲ್ಲ. ಆದಾಗ್ಯೂ ಉತ್ಪಾದಿಸಿದ ಎಲ್ಲಾ ವಾಹನಗಳನ್ನು ವಾಪಸ್ ಕರೆಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎಂದು ತಿಳಿಸಿದೆ.
 
ಯಮಹಾ ಕಾರ್ಖಾನೆ ಪರಿವರ್ತನೆ ಅಭಿಯಾನದ ಅಡಿಯಲ್ಲಿ ಭಾರತದ ಒಟ್ಟು 902 ಬೈಕ್‌ಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದು, ದೋಷ ಕಂಡು ಬಂದಿರುವ ಬೈಕ್‌ಗಳ ಬೀಡಿ ಭಾಗಗಳನ್ನು ಉಚಿತವಾಗಿ ಬದಲಾಯಿಸಿ ಕೊಡುತ್ತೇವೆ ಎಂದು ಯಮಹಾ ಸಂಸ್ಥೆ ತಿಳಿಸಿದೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ