ಟ್ವೀಟರ್ ನಲ್ಲಿ ಅತೀ ಹೆಚ್ಚು ಬಾರಿ ಟ್ವೀಟ್ ಮಾಡಲಾದ ಹ್ಯಾಶ್‌ ಟ್ಯಾಗ್ ಯಾವುದು ಗೊತ್ತಾ?

ಸೋಮವಾರ, 26 ಆಗಸ್ಟ್ 2019 (09:53 IST)
ನವದೆಹಲಿ : ಟ್ವೀಟರ್ ನಲ್ಲಿ ಹೆಚ್ಚಾಗಿ ಹ್ಯಾಶ್ ಟ್ಯಾಗ್ ಗಳನ್ನು ಬಳಸುತ್ತಾರೆ. ಟ್ವಿಟ್ಟರ್​ ಬಳೆದಾರರು ಟ್ರೆಂಡಿಂಗ್ ವಿಷಯವಿದ್ದರೆ ಹ್ಯಾಶ್​ ಟ್ಯಾಗ್​ಗಳನ್ನು ಬಳಸುತ್ತಾರೆ. ಈ ಬಾರಿ 2019ರ ಮೊದಲಾರ್ಧದಲ್ಲಿ ಬಳಸಿರುವ ಅತಿ ಹೆಚ್ಚಿನ ಬಾರಿ ಟ್ವೀಟ್ ಮಾಡಲಾದ ಹ್ಯಾಶ್‌ ಟ್ಯಾಗ್ ಗಳು ಯಾವುದೆಂದು ಬಹಿರಂಗಪಡಿಸಲಾಗಿದೆ.




ಹೌದು. ಇಂಟರ್​ ನೆಟ್​ನಲ್ಲಿ ಬಳಕೆ ಮಾಡುವ ಹ್ಯಾಶ್ ​​ಟ್ಯಾಗ್ ​ಗೆ 12ರ ಹರೆಯ. ಟ್ವಿಟ್ಟರ್​ ನಲ್ಲಿ ಅನೇಕ ಜನರು ಬಳಸಿದ ಹ್ಯಾಶ್​ಟ್ಯಾಗ್ ​ಗಳು ಬೇಗನೆ ಟ್ರೆಂಡ್​ ಸೃಷ್ಠಿಸಿಕೊಳ್ಳುತ್ತದೆ. ಹೆಚ್ಚು ಬಾರಿ ಬಳಕೆಯಾದ ಹ್ಯಾಶ್ ​ಟ್ಯಾಗ್​ಗಳು ಟಾಪ್​ ಟ್ರೆಂಡಿಂಗ್​ನಲ್ಲಿ​ ಗೋಚರಿಸುತ್ತದೆ.


ಹಾಗಾಗಿ ಈ ಬಾರಿ ಅತಿ ಹೆಚ್ಚಿನ ಬಾರಿ ಟ್ವೀಟ್ ಮಾಡಲಾದ ಹ್ಯಾಶ್‌ ಟ್ಯಾಗ್ ಎಂದರೆ ಅದು #Viswasam ತಮಿಳು ಆಕ್ಷನ್ ಡ್ರಾಮಾ ಫಿಲ್ಮ್ ಕುರಿತಾದ ಹ್ಯಾಶ್‌ ಟ್ಯಾಗ್‌ ಪ್ರಾಂತೀಯ ಮನರಂಜನೆ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು ಲೋಕಸಭೆ ಚುನಾವಣೆಯ ಕುರಿತಂತೆ #LokSabhaElections2019 ಹ್ಯಾಶ್ ​ಟ್ಯಾಗ್​ ಟ್ರೆಂಡ್​ ಆಗಿದೆ. ಅಂತೆಯೇ ಕ್ರಿಕೆಟ್​ ವಿಭಾಗದಲ್ಲಿ #CWC19 ಹ್ಯಾಶ್ ​ಟ್ಯಾಗ್​ ಮೂರನೇ ಸ್ಥಾನ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ