ಕೇವಲ 399 ರೂಪಾಯಿಗೆ ಬಿ.ಎಸ್.ಎನ್.ಎಲ್ ನೀಡುತ್ತಿದೆ ಅಮೆಜಾನ್ ಪ್ರೈಂ ಸದಸ್ಯತ್ವ

ಭಾನುವಾರ, 25 ಆಗಸ್ಟ್ 2019 (09:06 IST)
ನವದೆಹಲಿ : ಜಿಯೋ ಗಿಗಾಫೈಬರ್‌ ಬ್ರಾಡ್‌ ಬ್ಯಾಂಡ್‌ ಗೆ ಟಕ್ಕರ್ ನೀಡಲು ಸರ್ಕರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ತನ್ನ ಬ್ರಾಡ್‌ಬ್ಯಾಂಡ್‌ ಪ್ಯಾಕ್‌ ಗಳಲ್ಲಿ ಅತ್ಯುತ್ತಮ ಆಫರ್‌ ನೀಡಲು ಮುಂದಾಗಿದೆ.ಈ ಮೊದಲು ಕೇವಲ ವಾರ್ಷಿಕ 499ರೂ. ಮತ್ತು ಅದಕ್ಕೂ ಮೇಲ್ಪಟ್ಟ ಪ್ಲ್ಯಾನ್‌ನೊಂದಿಗೆ ಮಾತ್ರ ಉಚಿತವಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ ನೀಡುತ್ತಿತ್ತು. ಇದರೊಂದಿಗೆ 499ರಿಂದ 999 ರೂಪಾಯಿ ಯೋಜನೆಯಲ್ಲಿ ಶೇಕಡಾ 20‌ ರಷ್ಟು ಕ್ಯಾಶ್‌ ಬ್ಯಾಕ್ ಹಾಗೂ ಅದಕ್ಕಿಂತ ಮೇಲ್ಪಟ್ಟ ಪ್ಲಾನ್ ನಲ್ಲಿ ಶೇಕಡಾ 25ರಷ್ಟು ಕ್ಯಾಶ್‌ ಬ್ಯಾಕ್ ನೀಡುತ್ತಿತ್ತು.


ಇದೀಗ ಬಿ.ಎಸ್.ಎನ್.ಎಲ್ ನ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಕೇವಲ 399 ರೂಪಾಯಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಸಿಗಲಿದೆ. ಬ್ಯಾಂಡ್ ಬಳಕೆದಾರರು ಅಮೆಜಾನ್ ಪ್ರೈಂ ಮೂಲಕ ಟಿವಿ ಕಾರ್ಯಕ್ರಮ,‌ ಹಾಲಿವುಡ್, ಬಾಲಿವುಡ್ ಸಿನಿಮಾ, ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಇದು ಒಂದು ವರ್ಷ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೇ ಗ್ರಾಹಕರು 499 ಬ್ರಾಡ್ ಬ್ಯಾಂಡ್ ಸೇವೆ ಹೊಂದಿದ್ದರೆ ಅಮೆಜಾನ್ ಪ್ರೈಂ ಸದಸ್ಯತ್ವದ ಜೊತೆ ಶೇಕಡಾ 15ರಷ್ಟು ಕ್ಯಾಶ್‌ ಬ್ಯಾಕ್ ಪಡೆಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ