2020ರ ಜನವರಿಯೊಳಗೆ ಬ್ಯಾಂಕ್ ಖಾತೆದಾರರು ಈ ಕೆಲಸ ಮಾಡದಿದ್ದರೆ ರದ್ದಾಗುತ್ತೆ ನಿಮ್ಮ ಅಕೌಂಟ್
ಶುಕ್ರವಾರ, 11 ಅಕ್ಟೋಬರ್ 2019 (09:14 IST)
ನವದೆಹಲಿ : 2020ರ ಜನವರಿಯೊಳಗೆ ಎಲ್ಲಾ ಬ್ಯಾಂಕ್ ಖಾತೆದಾರರು ಕಡ್ಡಾಯವಾಗಿ ಬ್ಯಾಂಕ್ ಅಕೌಂಟ್ ಕೆವೈಸಿ ಅಪ್ಡೇಟ್ ಮಾಡಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.
ಬ್ಯಾಂಕ್ ಖಾತೆ ದುರ್ಬಳಕೆ, ವಂಚನೆ ತಡೆಯುವ ಉದ್ದೇಶದಿಂದ ಹಾಗೂ ಎಲ್ಲ ಬ್ಯಾಂಕ್ ಮತ್ತು ಆನ್ಲೈನ್ ಹಣಕಾಸು ವ್ಯವಹಾರ ನಡೆಸುವ ಆಪ್ ಗಳಲ್ಲಿ ಗ್ರಾಹಕರು ಸುರಕ್ಷಿತ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಗ್ರಾಹಕರ ಮಾಹಿತಿಯನ್ನು ಪಡೆದುಕೊಳ್ಳುವಂತೆ ಬ್ಯಾಂಕುಗಳಿಗೆ ಆರ್.ಬಿ.ಐ. ಸೂಚನೆ ನೀಡಿದೆ.
ಖಾತೆದಾರರು ಕೆವೈಸಿ ಬ್ಯಾಂಕಿಗೆ ಸಲ್ಲಿಸಲು 2019 ರ ಜನವರಿ 1 ಕೊನೆಯ ದಿನವಾಗಿದೆ. ಇನ್ನು ಪೇಟಿಎಂ, ಫೋನ್ ಪೇ ಮೊದಲಾದ ವ್ಯಾಲೆಟ್ ಬಳಸುತ್ತಿರುವವರು ಫೆಬ್ರವರಿ 29 ರ ಒಳಗೆ ತಮ್ಮ ಕೆವೈಸಿಯನ್ನು ಸಲ್ಲಿಸಬೇಕು. ಒಂದುವೇಳೆ ಕೆವೈಸಿ ಸಲ್ಲಿಸದ ಖಾತೆದಾರರ ಅಕೌಂಟ್ ಗಳನ್ನು ಸಂಬಂಧಿಸಿದ ಬ್ಯಾಂಕ್ ಗಳು ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.