ನಿಮ್ಮ ಫೇಸ್ಬುಕ್ ಖಾತೆಯನ್ನು ಸುಲಭವಾಗಿ ಹ್ಯಾಕ್ ಮಾಡಬಹುದು!
ಮಂಗಳವಾರ, 21 ಜೂನ್ 2016 (15:53 IST)
ವಿವಿಧ ಇಂಟರ್ನೆಟ್ ಸೇವೆಗಳಂತೆ ದೈತ್ಯ ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ ಕೂಡ್ ಬಳಕೆದಾರರಿಗೆ ತಮ್ಮ ಪಾಸ್ವರ್ಡ್ಗಳನ್ನು ಎಸ್ಎಮ್ಎಸ್ ಆಧಾರಿತ ದೃಢೀಕರಣ ಸೇವೆ ನೀಡುತ್ತಿದೆ.
ಪಾಸ್ವರ್ಡ್ ಮರೆಯುವಿಕೆ ಆಯ್ಕೆಯನ್ನು ಬಳಸಿಕೊಂಡು ಹ್ಯಾಕರ್ಗಳು ಬಳಕೆದಾರರ ಫೇಸ್ಬುಕ್ ಖಾತೆಗಳಿಗೆ ಲಾಗ್ಇನ್ ಆಗಲು ಪ್ರಯತ್ನಿಸುತ್ತಾರೆ. ಫೇಸ್ಬುಕ್ ಹ್ಯಾಕರ್ಗಳು ಎಸ್ಎಮ್ಎಸ್ ಮೂಲಕ ದೃಢೀಕರಣ ಕೋಡ್ ಸ್ವೀಕರಿಸಿ ಫೇಸ್ಬುಕ್ ಖಾತೆಯನ್ನು ಪ್ರವೇಶಿಸಲು ಸಹಕಾರಿಯಾಗುತ್ತದೆ.
ಕಳೆದ ಎಂಟು ವರ್ಷಗಳಿಂದ ಟೆರಿಕಾಮ್ ಸಂಸ್ಥೆಗಳು ಎಸ್ಎಸ್7 ಅಪ್ಡೇಟ್ ಮಾಡದಿರುವುದೆ ಈ ದೋಷಗಳಿಗೆ ಕಾರಣ ಎಂದು ಪಾಸಿಟಿವ್ ಟೆಕ್ನಾಲಜೀಸ್ ಮೊದಲ ವರದಿಯನ್ನು ನೀಡಿತ್ತು.
ಪಾಸಿಟಿವ್ ಟೆಕ್ನಾಲಜೀಸ್ ವರದಿಗೆ ಉತ್ತರ ನೀಡಿರುವ ಫೇಸ್ಬುಕ್, ದೃಢೀಕರಣ ಕೋಡ್ ಮೂಲಕ ಫೇಸ್ಬುಕ್ ಖಾತೆಗಳನ್ನು ಹ್ಯಾಕ್ ಮಾಡಬಹುದಾಗಿದೆ. ಆದರೆ, ಬಳಕೆದಾರ ಎರಡು ಅಂಶದ ದೃಢೀಕರಣ ಆಯ್ಕೆ ಮೂಲಕ ಖಾತೆಯನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ