ಕುವೈತ್-ಭಾರತ ಮಾತುಕತೆ

ಇಳಯರಾಜ

ಮಂಗಳವಾರ, 26 ಜೂನ್ 2007 (17:28 IST)
ರವಿವಾರದಿಂದ ಭಾರತದ ವಿಮಾನಗಳನ್ನು ರಾಜಧಾನಿಯನ್ನು ಪ್ರವೇಶಿಸಲು ಬಿಡುವುದಿಲ್ಲ ಎನ್ನುವ ಕುವೈತ್ ಸರಕಾರದ ಧೋರಣೆ ಹಿನ್ನೆಲೆಯಲ್ಲಿ ಕುವೈತ್ ಮತ್ತು ಭಾರತದ ನಡುವೆ ಮಾತುಕತೆ ಆರಂಭವಾಗಿದೆ.

ಭಾರತ ಮತ್ತು ಕುವೈತ್ ನಾಗರಿಕ ವಿಮಾನಯಾನ ಅಧಿಕಾರಿಗಳು ನವದೆಹಲಿಯಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸುತ್ತಿದ್ದು, ಉಭಯ ದೇಶಗಳ ಅಧಿಕಾರಿಗಳು ಜುಲೈ 1ರೊಳಗೆ ಅಂತಿಮ ನಿರ್ಧಾರಕ್ಕೆ ಬರಬಹುದು ಎಂದು ಕುವೈತ್‌ನಲ್ಲಿರುವ ಭಾರತದ ರಾಯಭಾರಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಭಾರತ ಮತ್ತು ಕುವೈತ್ ದೇಶಗಳ ನಡುವೆ ವಿಮಾನ ಸಂಚಾರ ರದ್ದುಗೊಳಿಸಿದಲ್ಲಿ ಪ್ರಯಾಣಿಕರಿಗೆ ಮತ್ತು ಸರಕು ಸಾಗಾಣಿಕೆಗೆ ತೀವ್ರ ತೊಂದರೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ಸಂಚಾರ ರದ್ದುಗೊಳಿಸುವ ಕುವೈತ್ ನಿರ್ಧಾರ ಕುರಿತಂತೆ ಏರ್ ಇಂಡಿಯಾ, ಇಂಡಿಯನ್ ಏರ್‌ಲೈನ್ಸ್‌ನಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲವೆಂದು ಟ್ರಾವೆಲ್ಸ್ ಎಜೆಂಟರು ತಿಳಿಸಿದ್ದಾರೆ. ‌

ವೆಬ್ದುನಿಯಾವನ್ನು ಓದಿ