ಡಿ ಬಾಸ್ ದರ್ಶನ್ ಕರೆಗೆ 70 ಲಕ್ಷ ಸಂಗ್ರಹ: ಸಚಿವ ಲಿಂಬಾವಳಿ ಅಭಿನಂದನೆ

ಗುರುವಾರ, 10 ಜೂನ್ 2021 (08:43 IST)
ಬೆಂಗಳೂರು: ಕೊರೋನಾ ಸಂಕಷ್ಟ ಕಾಲದಲ್ಲಿ ಪ್ರಾಣಿಗಳ ಸಂರಕ್ಷಣೆಗೆ ಮುಂದಾಗಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಕರೆಗೆ ನಾಲ್ಕು ದಿನಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ.


ನಾಲ್ಕೇ ದಿನಗಳಲ್ಲಿ ಸುಮಾರು 70 ಲಕ್ಷ ರೂ.ಗೂ ಅಧಿಕ ಸಂಗ್ರಹವಾಗಿದೆ. ದರ್ಶನ್ ಕರೆಗೆ ಓಗೊಟ್ಟ ಅಭಿಮಾನಿಗಳು ತಾಮುಂದು ತಾಮುಂದು ಎಂದು ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ನಾಲ್ಕು ದಿನಗಳಲ್ಲಿ ದತ್ತು ಪಡೆಯಲೆಂದೇ 70 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿರುವುದು ದರ್ಶನ್ ಗಿರುವ ಜನಪ್ರಿಯತೆ ಸೂಚಿಸುತ್ತದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ನ ಈ ಮಾನವೀಯತೆಗೆ ಮತ್ತು ಅವರ ಕರೆಗೆ ಓಗೊಟ್ಟ ಅಭಿಮಾನಿಗಳನ್ನು ಕಂಡು ಸ್ವತಃ ಸಚಿವ ಅರವಿಂದ ಲಿಂಬಾವಳಿ ಅಭಿನಂದನೆ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ