ಒಂದೇ ದಿನ ಸಾಲು ಸಾಲು ಸಿನಿಮಾ ರಿಲೀಸ್

ಶುಕ್ರವಾರ, 8 ಜುಲೈ 2022 (08:40 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಶುಭ ಶುಕ್ರವಾರವಾಗಿದ್ದು ಒಂದೇ ದಿನ 9 ಸಿನಿಮಾಗಳು ಬಿಡುಗಡೆಯಾಗುತ್ತಿವೆ.
 

ಆದರೆ ಎಲ್ಲಾ ಸಿನಿಮಾಗಳು ಸ್ಟಾರ್ ನಟರ ಅಬ್ಬರಗಳಿಲ್ಲದ ಹೊಸ ಬಗೆಯ, ಹೊಸಬರ ಸಿನಿಮಾಗಳು. ಹೀಗಾಗಿ ನಿಮ್ಮ ಆಯ್ಕೆಯ ಸಿನಿಮಾವನ್ನು ಥಿಯೇಟರ್ ನಲ್ಲಿ ವೀಕ್ಷಿಸಬಹುದು.

ತೂತು ಮಡಿಕೆ, ಹೋಪ್, ವೆಡ್ಡಿಂಗ್ ಗಿಫ್ಟ್, ಶುಗರ್ ಲೆಸ್, ಧೋನಿ, ನಮ್ಮ ಹುಡುಗರು, ಗಿರ್ಕಿ, ಅಂಗೈಲಿ ಅಕ್ಷರ, ಚೋಟಾ ಬಾಂಬೆ ಎಂಬ ಸಿನಿಮಾಗಳು ಇಂದು ಸಾಲು ಸಾಲಾಗಿ ಬಿಡುಗಡೆಯಾಗುತ್ತಿವೆ. ಇವೆಲ್ಲಾ ಸಿನಿಮಾಗಳಿಗೂ ಸ್ಟಾರ್ ಕಾಸ್ಟ್ ಗಳಿಲ್ಲ. ಆದರೆ ಎಲ್ಲಾ ಸಿನಿಮಾಗಳೂ ನಿರೀಕ್ಷೆ ಹುಟ್ಟಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ