ಕನ್ನಡದ ‘ಆ ಕರಾಳ ರಾತ್ರಿ’ ಸಿನಿಮಾ ತೆಲುಗು, ತಮಿಳಿಗೆ ರಿಮೇಕ್

ಬುಧವಾರ, 9 ಸೆಪ್ಟಂಬರ್ 2020 (10:31 IST)
ಹೈದರಾಬಾದ್ : ಕನ್ನಡ ಅತ್ಯುತ್ತಮ ಸಿನಿಮಾ ಎಂದು ಹೆಸರು ಪಡೆದ ‘ಆ ಕರಾಳ ರಾತ್ರಿ’ ಸಿನಿಮಾ ತೆಲುಗು, ತಮಿಳಿನಲ್ಲಿ ರಿಮೇಕ್ ಆಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

2018ರಲ್ಲಿ ಬಿಡುಗಡೆಯಾದ ಬಿಗ್ ಬಾಸ್ ಸ್ಪರ್ಧಿಗಳಾದ ಕಾರ್ತಿಕ್ ಜಯರಾಂ ಮತ್ತು ಅನುಪಮಾ ಗೌಡ ನಟಿಸಿದ ಸಿನಿಮಾ ‘ಆ ಕರಾಳ ರಾತ್ರಿ’ ಸೂಪರ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಮಾತ್ರವಲ್ಲ ಅತ್ಯುತ್ತಮ ಸಿನಿಮಾ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಹಾಗೇ ಈ ಸಿನಿಮಾ ನಿರ್ದೇಶಕ ದಯಾಳ್ ಪದ್ಮನಾಭನ್ ಗೂ ಅತ್ಯುತ್ತಮ ನಿರ್ದೇಶಕ ರಾ್ಯ ಪ್ರಶಸ್ತಿ ಸಿಕ್ಕಿತ್ತು.

ಇದೀಗ ಈ ಸಿನಿಮಾವನ್ನು ತೆಲುಗು, ತಮಿಳಿನಲ್ಲಿ ರಿಮೇಕ್ ಮಾಢಲು ನಿರ್ಧರಿಸಿದ್ದು, ಖ್ಯಾತ ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ತೆಲುಗಿನಲ್ಲಿ ನಿರ್ಮಾಣ ಮಾಡಲಿದ್ದಾರೆ. ಹಾಗೇ   ನಿರ್ದೇಶಕ ದಯಾಳ್ ಪದ್ಮನಾಭನ್ ಅವರೇ ತೆಲುಗಿನಲ್ಲೂ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ