ಹೊಸ ಫ್ಯಾಷನ್ ಬ್ರ್ಯಾಂಡ್ ಆರಂಭಿಸಿದ ನಟಿ ಸಮಂತಾ ಅಕ್ಕಿನೇನಿ
ಸೋಮವಾರ, 7 ಸೆಪ್ಟಂಬರ್ 2020 (12:41 IST)
ಹೈದರಾಬಾದ್ : ಟಾಲಿವುಡ್ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸಿನಿಮಾ ಬಿಟ್ಟು ಬ್ಯುಸಿನೆಸ್ ಕಡೆಗೆ ಮುಖಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹೌದು. ನಟಿ ಸಮಂತಾ ಅಕ್ಕಿನೇನಿ ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಆರಂಭಿಸಿದ್ದಾರೆ. ಅದಕ್ಕೆ ಸಾಕಿ ಎಂದು ಹೆಸರಿಟ್ಟಿದ್ದಾರೆ.ಈ ವಿಚಾರವನ್ನು ನಟಿ ಸಮಂತಾ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು,ಸಾಕಿ ನನ್ನ ಮತ್ತು ನಾಗಚೈತನ್ಯನ ಕನಸಿದು. ನನ್ನ ಫ್ಯಾಷನ್ ಪ್ರೀತಿ ಮತ್ತು ಜೀವನ ಪಯಣದ ಪ್ರತಿರೂಪ. ಶೀಘ್ರದಲ್ಲಿಯೇ ಲಾಂಚ್ ಆಗಲಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ವಿಡಿಯೋವೊಂದನ್ನು ಶೇರ್ ಮಾಡಿದ್ದು, ನನ್ನ ಲೇಬಲ್ ಫ್ಯಾಷನ್ ಎಲ್ಲರಿಗೂ ಕೈಗೆಟುಕುವ ಮತ್ತು ತಲುಪಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.