ಮದುವೆ ಯಾವಾಗ ಎಂದ ಅಭಿಮಾನಿಗೆ ಅಭಿಷೇಕ್ ಅಂಬರೀಶ್ ಉತ್ತರ ಏನು ಗೊತ್ತಾ?
ಈ ವೇಳೆ ಅಭಿಮಾನಿಯೊಬ್ಬರು ಅಭಿಷೇಕ್ ಗೆ ನಿಮ್ಮ ಮದುವೆ ಯಾವಾಗ ಎಂಬುದು ಎಲ್ಲರ ಮಿಲಿಯನ್ ಡಾಲರ್ ಪ್ರಶ್ನೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅಭಿಷೇಕ್ ಮಿಲಿಯನ್ ಡಾಲರ್ ನನಗೆ ಕೊಡಿ, ಆಗ ಹೇಳ್ತೀನಿ ಎಂದು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
ಈ ಪ್ರಶ್ನೋತ್ತಾರವಳಿಯಲ್ಲಿ ಅನೇಕ ಪ್ರಶ್ನೆಗಳು ಬಂದಿದ್ದು, ನಿಮ್ಮ ಕ್ರಶ್ ಯಾರು ಎಂದೂ ಒಬ್ಬರು ಕೇಳಿದ್ದಾರೆ. ಇದಕ್ಕೆ ನನಗೆ ನಾನೇ ಕ್ರಶ್ ಎಂದಿದ್ದಾರೆ ಅಭಿ.