ತಂದೆಯ ಜನ್ಮದಿನ ಅಭಿಷೇಕ್ ಅಂಬರೀಶ್ ಎರಡು ಸಿನಿಮಾಗಳು ಅನೌನ್ಸ್

ಭಾನುವಾರ, 29 ಮೇ 2022 (17:35 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದಂದು ಅವರ ಪುತ್ರ ಅಭಿಷೇಕ್ ಅಂಬರೀಶ್ ನಾಯಕರಾಗಲಿರುವ ಎರಡು ಸಿನಿಮಾಗಳು ಘೋಷಣೆಯಾಗಿವೆ.

ಅಮರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಅಭಿ ಈಗ ಬ್ಯಾಟ್ ಮ್ಯಾನರ್ಸ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಮತ್ತೆರಡು ಹೊಸ ಸಿನಿಮಾಗಳು ಘೋಷಣೆಯಾಗಿವೆ.

ನಿರ್ದೇಶಕ ಕೃಷ್ಣ ಆಕ್ಷನ್ ಕಟ್ ಹೇಳಲಿರುವ ‘ಕಾಳಿ’ ಸಿನಿಮಾ ಮತ್ತು ಅಯೋಗ್ಯ ಖ್ಯಾತಿಯ ಎಸ್.ಮಹೇಶ್ ಕುಮಾರ್ ನಿರ್ದೇಶನದ  ಹೊಸ ಸಿನಿಮಾ ಘೋಷಣೆಯಾಗಿವೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಇಡಲಾಗಿಲ್ಲ. ಆದರೆ ಎರಡೂ ಸಿನಿಮಾಗಳ ಪೋಸ್ಟರ್ ನೋಡುತ್ತಿದ್ದರೆ ಪಕ್ಕಾ ಆಕ್ಷನ್ ಥ್ರಿಲ್ಲರ್ ಎನ್ನುವುದು ಖಚಿತವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ