ಸಾಲು ಸಾಲು ಸಿನಿಮಾ ಒಪ್ಪಿಕೊಂಡ ಜ್ಯೂ. ರೆಬಲ್ ಸ್ಟಾರ್ ಅಭಿಷೇಕ್

ಗುರುವಾರ, 21 ಏಪ್ರಿಲ್ 2022 (07:00 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ಪುತ್ರ, ಜ್ಯೂ. ಅಭಿಷೇಕ್ ಅಂಬರೀಶ್ ಸಾಲು ಸಾಲು ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ.

ಈಗಾಗಲೇ ಅಮರ್ ಸಿನಿಮಾ ರಿಲೀಸ್ ಆಗಿ ಸೂರಿ ನಿರ್ದೇಶನದಲ್ಲಿ ಅಭಿ ‘ಬ್ಯಾಡ್ ಮ್ಯಾನರ್ಸ್’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಮೂರು-ನಾಲ್ಕು ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ.

ಮದಗಜ ಖ್ಯಾತಿಯ ಮಹೇಶ್ ಕುಮಾರ್ ಗೆ ಒಂದು, ಪ್ರಶಾಂತ್ ರಾಜ್ ಜೊತೆಗೆ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ