‘ಕಾರ್ತೀಕೇಯ 2’ ಸೆಟ್ ನಲ್ಲಿ ಅಪಘಾತ; ನಟ ನಿಖಿಲ್ ಸಿದ್ಧಾರ್ಥ್ ಕಾಲಿಗೆ ಗಾಯ

ಶುಕ್ರವಾರ, 12 ಮಾರ್ಚ್ 2021 (09:31 IST)
ಹೈದರಾಬಾದ್ : ಯುವ ನಟ  ನಿಖಿಲ್ ಸಿದ್ಧಾರ್ಥ್ ಅವರು ತಮ್ಮ ಮುಂಬರುವ ಥ್ರಿಲ್ಲರ್ ಚಿತ್ರ ಕಾರ್ತಿಕೇಯ 2 ದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಕಾರ್ತೀಕೇಯ 2 ಸೆಟ್ ನಲ್ಲಿ ಅಪಘಾತ ಸಂಭವಿಸಿದೆಯಂತೆ.

ಹೌದು, ನಟ ನಿಖಿಲ್ ಸಿದ್ಧಾರ್ಥ್ ಅವರು ಸ್ಟಂಟ್ ಪ್ರದರ್ಶನ ಮಾಡುವಾಗ ಎಡವಿ ಕಾಲಿಗೆ ಗಾಯ ಮಾಡಿಕೊಂಡಿದ್ದಾರಂತೆ. ಸದ್ಯಕ್ಕೆ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆದರೆ ಅವರಿಗೆ ಬೆಡ್ ರೆಸ್ಟ್ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಾರ್ತೀಕೇಯ 2 ಚಿತ್ರದ ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ