ತಮ್ಮ ಸಂಭಾವನೆ ಹೆಚ್ಚಿಸಿಕೊಂಡ ‘ಜತಿ ರತ್ನಲು’ ನಟ ನವೀನ್ ಪಾಲಿಶೆಟ್ಟಿ

ಶುಕ್ರವಾರ, 19 ಮಾರ್ಚ್ 2021 (12:29 IST)
ಹೈದರಾಬಾದ್ : ಇತ್ತೀಚೆಗೆ ಬಿಡುಗಡೆಯಾದ ಹಾಸ್ಯ ಚಿತ್ರ ಜತಿ ರತ್ನಲು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಚಿತ್ರದಲ್ಲಿ ನಟಿಸಿದ ನಟ ನವೀನ್ ಪಾಲಿಶೆಟ್ಟಿ ಅವರು ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರಂತೆ.

ಇತ್ತೀಚನ ಮಾಹಿತಿ ಪ್ರಕಾರ ನವ ರಾನ್ ಕೃಷ್ಣಯ್ಯ ನಿರ್ದೇಶನದ ಮಹೇಶ್ ಪಿ ಅವರ ತೆಲುಗು ಚಿತ್ರಕ್ಕೆ ನವೀನ್ ಪಾಲಿಶೆಟ್ಟಿ ಗ್ರೀನ್ ಸಿಗ್ನಲ್ ನೀಡಿದ್ದು, ಅದರಲ್ಲಿ ನಟಿಸಲು 2 ಕೋಟಿ ರೂ. ಸಂಭಾವನೆ ಕೇಳಿದ್ದಾರಂತೆ.

ಈ ಚಿತ್ರದಲ್ಲಿ ನವೀನ್ ಪಾಲಿಶೆಟ್ಟಿ  ಜೊತೆ ನಟಿ ಅನುಷ್ಕಾ ಶೆಟ್ಟಿ ತೆರೆ ಹಂಚಿಕೊಳ್ಳಲಿದ್ದಾರಂತೆ. ಈ ಚಿತ್ರ ಮಧ್ಯವಯಸ್ಕ ಮಹಿಳೆಯನ್ನು ಪ್ರೀತಿಸುವ ಯುವಕನ ಕಥೆಯ ಸುತ್ತ ಸುತ್ತುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ