ವಕೀಲ್ ಸಾಬ್ ಚಿತ್ರದ ಪೂರ್ವ ಬಿಡುಗಡೆಯ ಕಾರ್ಯಕ್ರಮದ ದಿನಾಂಕ ನಿಗದಿ

ಶುಕ್ರವಾರ, 19 ಮಾರ್ಚ್ 2021 (09:41 IST)
ಹೈದರಾಬಾದ್ : ನಟನಾ ಕ್ಷೇತ್ರಕ್ಕೆ ಮರುಪ್ರವೇಶ ಮಾಡಿದ ನಟ  ಪವನ್ ಕಲ್ಯಾಣ್ ಅವರು ‘ವಕೀಲ್ ಸಾಬ್’ಚಿತ್ರದಲ್ಲಿ ನಟಿಸಿದ್ದಾರೆ. ಇದು ಪಿಂಕ್ ಚಿತ್ರ ರಿಮೇಕ್ ಆಗಿದ್ದು, ಇದರ ಚಿತ್ರೀಕರಣ ಈಗಾಗಲೇ ಮುಗಿದಿದೆ.

ಇದೀಗ ಈ ಚಿತ್ರದ ಪೂರ್ವ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಎಪ್ರಿಲ್ 3ರಂದು  ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ವಕೀಲ್ ಸಾಬ್ ಚಿತ್ರವನ್ನು ದಿಲ್ ರಾಜು ಮತ್ತು ಬೋನಿ ಕಪೂರ್ ನಿರ್ಮಿಸುತ್ತಿದ್ದು, ವೇಣು ಶ್ರೀರಾಮ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪವನ್ ಅವರಿಗೆ ಜೋಡಿಯಾಗಿ ನಟಿ ಶ್ರುತಿ ಹಾಸನ್ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ